ಕುಷ್ಟಗಿ –
ಸರ್ಕಾರಿ ಶಾಲೆಗೆ ದಿಢೀರ್ ಆಗಿ ಶಾಸಕರೊಬ್ಬರು ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.ಹೌದು ಕೊಪ್ಪಳದ ಕುಷ್ಟಗಿಯ ಪಟ್ಟಣದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಅವರೇ ಭೇಟಿ ನೀಡಿ ಶಾಲೆಗೆ ಗೈರಾದ ಶಿಕ್ಷಕರ ಮೇಲೆ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಶಿಕ್ಷಕರು ಸಮಯ ಪಾಲನೆ ಮಾಡದ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಡಿದರು.ಜೊತೆಗೆ ಗೈರಾದ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.ಕುಷ್ಟಗಿ ಪಟ್ಟಣದ 3ನೇ ವಾರ್ಡ್ ನ ಗೌರಿ ನಗರ, ನೆರೆಬೆಂಚಿ, ಕುರಬನಾಳ ದಿಢೀರ್ ಭೇಟಿ ನೀಡಿ ಮಕ್ಕಳ ಹಾಜರಿ, ಶಿಕ್ಷಕರ ಹಾಜರಿ ದಾಖಲೆ ಪರಿಶೀಲಿಸಿದ ರಲ್ಲದೇ ಶಾಲೆಯ ಕುಂಧು ಕೊರತೆಗಳ ಬಗ್ಗೆ ವಿಚಾರಿಸಿದರು
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕುಷ್ಟಗಿ ಪಟ್ಟಣದ 3ನೇ ವಾರ್ಡ್ ನ ಗೌರಿ ನಗರ,ನೆರೆಬೆಂಚಿ, ಕುರಬ ನಾಳ ದಿಢೀರ್ ಭೇಟಿ ನೀಡಿ ಮಕ್ಕಳ ಹಾಜರಿ,ಶಿಕ್ಷಕರ ಹಾಜರಿ ದಾಖಲೆ ಪರಿಶೀಲಿಸಿದರಲ್ಲದೇ ಶಾಲೆಯ ಕುಂದು ಕೊರತೆಗಳ ಬಗ್ಗೆ ವಿಚಾರಿಸಿದರು.ಗೌರಿ ನಗರದ ಶಾಲೆಯಲ್ಲಿ ಶಿಕ್ಷಕರೊಬ್ಬರು ಗೈರಾಗಿದ್ದರಿಂದ ಸದರಿ ಶಿಕ್ಷಕರಿಗೆ ನೋಟೀಸ್ ಜಾರಿ ಮಾಡಲು,ಕ್ಷೇತ್ರ ಶಿಕ್ಷಣಾಧಿಕಾರಿಗೆ ಮೋಬೈಲ್ ನಲ್ಲಿ ಸಂಪರ್ಕಿಸಲು ಸೂಚಿಸಿದರು. ಇದೇ ವೇಳೆ ಮಕ್ಕಳಿಗೆ ಗುಣಮಟ್ಟದ ಬಿಸಿಊಟ,ಕ್ಷೀರ ಭಾಗ್ಯ, ಶಿಕ್ಷಕರು ಗುಣಮಟ್ಟದ ಶಿಕ್ಷಣದ ಬಗ್ಗೆ ವಿಚಾರಿಸಿದರು. ಶಾಲೆಗೆ ಅಗತ್ಯವಿರುವ ಮೂಲಸೌಕರ್ಯಗಳ ಬಗ್ಗೆ ವಿಚಾರಿಸಿದರಲ್ಲದೇ ಶಿಕ್ಷಕರು ನಿಯಮಿತವಾಗಿ ಶಾಲೆಗೆ ಹಾಜರಾಗಿರಲು ಸೂಚಿಸಿದರು.ಇದೇ ವೇಳೆ ತಾ.ಪಂ. ಇಓ ಡಾ. ಜಯರಾಮ್ ಚೌವ್ಹಾಣ ಹಾಜರಿದ್ದರು