ಕಲಬುರ್ಗಿ –
ರಸ್ತೆಯಲ್ಲಿ ಬಿದ್ದ ತೆಗ್ಗು ಗುಂಡಿಗಳಿಂದಾಗಿ ಅಪಘಾತ ಆಗುತ್ತಿದ್ದು ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಟ್ರಾಫಿಕ್ ಪೇದೆಯೊ ಬ್ಬರು ಸಾಮಾಜಿಕ ಕಾರ್ಯವನ್ನು ಮಾಡಿದ್ದಾರೆ
ಹೌದು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಕರ್ತವ್ಯ ದ ಮೇಲೆ ಇದ್ದ ಇವರೇ ಮುಚ್ಚಿದರು.ನಗರದ ಆಳಂದ ಚೆಕ್ ಪೊಸ್ಟ್ ಸರ್ಕಲ್ ನಲ್ಲಿ ಬಿದ್ದಿದ್ದ ಗುಂಡಿಗಳನ್ನು ಸಂಚಾರಿ ಪೊಲೀಸ್ ಪೇದೆ ಅವರು ಮುಚ್ಚಿದರು
ರಸ್ತೆ ಗುಂಡಿಗಳನ್ನು ರಸ್ತೆ ಪಕ್ಕದಲ್ಲಿರುವ ಮಣ್ಣಿನಿಂದ ಮುಚ್ಚಿದರು.ತಾವೇ ಸ್ವತಃ ಕೈಯಲ್ಲಿ ಸಲಿಕೆಯನ್ನು ಹಿಡಿದುಕೊಂಡು ಮಣ್ಣನ್ನು ತುಂಬಿ ತೆಗ್ಗುಗಳಿಗೆ ಹಾಕಿ ಮುಚ್ಚಿದರು.
ಪೇದೆ ಚಂದ್ರಶಾ ಪೂಜಾರಿಯವರಿಂದ ನಡೆದ ಈ ಒಂದು ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾ ಗಿದೆ.ಚಂದ್ರಶಾ ಪೂಜಾರಿ ಗುಂಡಿ ಮುಚ್ಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪೇದೆ ಚಂದ್ರಶಾ ಅವರ ಕಾರ್ಯಕ್ಕೆ ಕಲಬು ರಗಿ ಜನ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಚಾರಿ ಪೊಲೀಸ್ ಠಾಣೆ ಎರಡರಲ್ಲಿ ಕೆಲಸ ಮಾಡುತ್ತಿದ್ದಾರೆ ಚಂದ್ರಶಾ ಪೂಜಾರಿಯವರು.ರಸ್ತೆಯಲ್ಲಿ ಗುಂಡಿ ಗಳು ಬಿದ್ದಿದ್ದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು.