ಚಿಕ್ಕಬಳ್ಳಾಪುರ –
ಹೆತ್ತ ಮಗುವನ್ನ ಮಾರಾಟ ಮಾಡಿದ ತಾಯಿ ಜೈಲುಪಾಲಾದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಪ್ರಭಾಕರ್ ಗೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಚಂದನಳನ್ನು 24-05-2020 ರಂದು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.

ಆದರೆ ದಂಪತಿಗೆ ಮದುವೆಯಾದ ಮೂರು ತಿಂಗಳಲ್ಲಿ ಅಂದರೆ 21 ಸೆಪ್ಟೆಂಬರ್ 2020 ರಂದು ಪತ್ನಿ ಚಂದನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು.

ಇದ್ರಿಂದ ಅನುಮಾನಗೊಂಡ ಪತಿ ಹಾಗೂ ಹುಟ್ಟಿದ ಮಗು ನನ್ನದಲ್ಲ ಅಂತ ಖ್ಯಾತೆ ತೆಗೆದು ಪತ್ನಿ ಮಗುವನ್ನ ವಾಪಸ್ ತವರಿಗೆ ಕಳಿಸಿದ್ದನಂತೆ.

ಆದರೆ ಪತ್ನಿ ಚಂದನಾ ತವರು ಮನೆಗೆ ಹೋಗುವಾಗ ಮಗುವನ್ನ ದಂಪತಿಯೊಬ್ಬರಿಗೆ ಮಗುವನ್ನು ಮಾರಾಟ ಮಾಡಿ ತವರು ಮನೆ ಸೇರಿದ್ದಳು ಇದಾದ ೫ ತಿಂಗಳ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ದಾಖಲಾಗಿದೆ.

ದೂರಿನನ್ವಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದಾಗ ಮಗು ಮಾರಾಟ ಮಾಡಿರುವ ವಿಷಯ ಬಯಲಾಗಿದೆ.ನಂತರ ಅನಧಿಕೃತವಾಗಿ ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನ ಮಲ್ಲೇಶ್ ಹಾಗೂ ರೂಪಾ ದಂಪತಿಗೆ ಮಗುವನ್ನು ಮಾರಾಟ ಮಾಡಿರೋದಾಗಿ ತಿಳಿದುಬಂದಿದೆ.

ಘಟನೆ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗುವನ್ನ ಮಾರಾಟ ಮಾಡಿದ ತಾಯಿ ಚಂದನಾ. ಚಂದನಾ ತಂದೆ ನಾಗರಾಜ್ ಆಕೆಯ ತಾಯಿ ನಾಗಮಣಿ. ಅಕ್ರಮವಾಗಿ ದತ್ತು ಪಡೆದ
ರೂಪಾವತಿ ಬಂಧನ ಮಾಡಲಾಗಿದೆ.

ಮಲ್ಲೇಶ್ ತಲೆ ಮೆರೆಸಿಕೊಂಡಿದ್ದು. ಚಿಕ್ಕಬಳ್ಳಾಪುರ ಮಹಿಳಾ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಸಧ್ಯ ಮಗುವನ್ನ ರಕ್ಷಣೆ ಮಾಡಿರುವ ಅಧಿಕಾರಿಗಳು ಚಿಕ್ಕಬಳ್ಳಾಪುರ ನಗರದ ಮಕ್ಕಳ ಪಾಲನಾ ಕೇಂದ್ರದಲ್ಲಿ ಇರಿಸಲಾಗಿದ್ದು ಹಾರೈಕೆ ಮಾಡುತ್ತಿದ್ದಾರೆ.