ಕೊಪ್ಪಳ –
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರೆಯಲಾ ಗಿದ್ದ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಒ ಸಭೆಗೆ ಗೈರು ಹಾಜರಾದ ಹಿನ್ನಲೆಯಲ್ಲಿ ಎಂಟು PDO ಗಳ ನ್ನು ಅಮಾನತು ಮಾಡಿರುವ ಘಟನೆ ಕೊಪ್ಪಳ ದಲ್ಲಿ ನಡೆದಿದೆ. 5 ಪಿಡಿಒ ಗಳು ಮತ್ತು ಹಣಕಾಸು ವಹಿ ವಾಟಿನಲ್ಲಿ ಕರ್ತವ್ಯ ಲೋಪ ಎಸಗಿದ ಓರ್ವ ಹಾಗೂ ಸರ್ಕಾರದ ಆದೇಶ ಪಾಲಿಸದ ಇಬ್ಬರು ಪಿಡಿಒ ಸೇರಿ ದಂತೆ ಎಂಟು ಪಿಡಿಒಗಳನ್ನು ಕೊಪ್ಪಳ ಜಿ.ಪಂ ಸಿಇಒ ರಘುನಂದನ್ ಮೂರ್ತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಎರಡನೇ ಅಲೆಯ ಸೋಂಕಿನ ಪ್ರಮಾಣ ಹೆಚ್ಚಾಗು ತ್ತಿವೆ. ಈ ಹಿನ್ನೆಲೆಯಲ್ಲಿ ಡಿಸಿ ಹಾಗೂ ಸಿಇಒ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಗ್ರಾ.ಪಂ ಪಿಡಿಒಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಕೊಪ್ಪಳ ತಾಲೂಕಿನ ಅಗಳಕೇರಾ,ಪಿಡಿಒ ಬಸವರಾ ಜ ಕಿರ್ದಿ,ಇಂದರಗಿ pdo ಬಿ.ಕೃಷ್ಣಾರಡ್ಡಿ, ಯಲಬು ರ್ಗಾ ತಾಲೂಕಿನ ಹಿರೇ ವಂಕಲಕುಂಟಾ ಪಿಡಿಒ ಜುಮಾಲ್ ಸಾಬ, ಕುಕನೂರು ತಾಲೂಕಿನ ಯರೇ ಹಂಚಿನಾಳ ಪಿಡಿಒ ಮಹೇಶಗೌಡ, ಕುಷ್ಟಗಿ ತಾಲೂಕಿ ನ ಕೇಸೂರು ಪಿಡಿಒ ನಾಗರತ್ನಾ ಅವರು ಸಭೆಗೆ ಗೈರು ಹಾಜರಾಗಿ ನಿರ್ಲಕ್ಷ ತೋರಿದ್ದರು.

ಅಲ್ಲದೇ ಸಭೆಗೆ ಗೈರು ಹಾಜರಾದ ಕುರಿತಂತೆ ಸಿಇಒ ನೋಟಿಸ್ ನೀಡಿದ್ದರೂ ಅದಕ್ಕೆ ಸಮರ್ಪಕ ಉತ್ತರ ಕೊಡದ ಹಿನ್ನೆಲೆಯಲ್ಲಿ ಐವರನ್ನು ಕರ್ತವ್ಯ ನಿರ್ಲಕ್ಷತ ನ ತೋರಿ ಅಮಾನತು ಮಾಡಲಾಗಿದೆ.ಇನ್ನೂ ಗ್ರಾ. ಪಂ ವ್ಯಾಪ್ತಿಯಲ್ಲಿನ ನಿವೇಶನಗಳಿಗೆ ಗ್ರಾ.ಪಂನಿಂದ 9 ಮತ್ತು 11 ಫಾರಂ ನೀಡದೇ ಸರ್ಕಾರದ ಕರ್ತವ್ಯ ದಲ್ಲಿ ಲೋಪ ಎಸಗಿದ ಕೊಪ್ಪಳ ತಾಲೂಕಿನ ಮತ್ತೂ ರು ಗ್ರಾ.ಪಂನ ಸೋಮಶೇಖರ, ಕರ್ತವ್ಯಕ್ಕೆ ಅನಧಿ ಕೃತ ಗೈರಾದ ಹಾಸಗಲ್ ಗ್ರಾ.ಪಂನ ಪ್ರಕಾಶ ಸಜ್ಜನ್ ಹಾಗೂ 14 ಮತ್ತು 15 ನೇ ಹಣಕಾಸು ಯೋಜನೆ ಯಡಿ ಹಣ ದುರುಪಯೋಗ ಮಾಡಿಕೊಂಡ ಅಗಳ ಕೇರಾ ಗ್ರಾ.ಪಂ ಈ ಹಿಂದಿನ ಪಿಡಿಒ ಆಗಿದ್ದ ಗೌಸು ಸಾಬ ಮುಲ್ಲಾ ಅವರನ್ನು ಅಮಾನತು ಮಾಡಿದೆ

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8 ಪಿಡಿಒಗಳನ್ನು ಜಿ.ಪಂ ಸಿಇಒ ಅವರು ಅಮಾನತು ಮಾಡುವುದರ ಮೂಲ ಕ ನಿರ್ಲಕ್ಷ್ಯತನ ತೋರುವ ಅಧಿಕಾರಿಗಳ ಮೇಲೆ ಅಮಾನತಿನ ಅಸ್ತ್ರ ಬೀಸುವ ಮೂಲಕ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ