ತುಮಕೂರು –
ಪಾಗಲ್ ಪ್ರೇಮಿಯಿಂದ ಅಪ್ರಾಪ್ತೆ ಬಾಲಕಿಯೊಬ್ಬಳ ಕೊಲೆ ಮಾಡಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಪ್ರೀತಿ ನೀರಾಕರಿಸಿದ್ದಕ್ಕೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ ಪಾಪಿ.ಅಪ್ರಾಪ್ತ ಬಾಲಕಿ ಪ್ರೀತಿಯನ್ನು ನೀರಾಕರಿಸಿದ್ದಕ್ಕೆ ಹರಿತವಾದ ಆಯು ಧದಿಂದ ಇರಿದು ಕೊಲೆಗೈಯಲಾಗಿದೆ.

ಶಿರಾ ತಾಲ್ಲೂಕಿನ ದೊಡ್ಡಗುಳ್ಳ ಗ್ರಾಮದ ಹೊರವಲ ಯದಲ್ಲಿ ಈ ಒಂದು ಘಟನೆ ನಡೆದಿದೆ. ಈರಣ್ಣ ಹರಿತವಾದ ಆಯುಧದಿಂದ ಇರಿದು ಕೊಲೆಗೈದ ಆರೋಪಿಯಾಗಿದ್ದಾನೆ.ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ ಈರಣ್ಣ

ತಾಳಿ ಕಟ್ಟಲು ಪ್ರಯತ್ನಿಸಿದ ಈರಣ್ಣಗೆ ಅಪ್ರಾಪ್ತೆ ಯಿಂದ ಪ್ರತಿರೋಧ ವ್ಯಕ್ತವಾಗಿದೆ.ಹೀಗಾಗಿ ಆಕ್ರೋಶಗೊಂಡ ಈರಣ್ಣ ಯುವತಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸಧ್ಯ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.