ಕುಡಚಿ –
ನಾಲ್ವರ ಕೊಲೆ ಸಾಕ್ಷಿಯಾಯಿತು ಮೊಬೈಲ್ ಟಾವರ್ – ಉಡುಪಿ ಯಲ್ಲಿ ಕೊಲೆ ಮಾಡಿ ಕುಡಚಿಯಲ್ಲಿ ಅಡಗಿ ಕುಳಿತವನನ್ನು ಪತ್ತೆ ಮಾಡಿದ ಪೊಲೀಸರು ಹೌದು ಕಳೆದ ವಾರವಷ್ಟೇ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಪೊಲೀಸರು ಬೇಧಿಸಿ ದ್ದಾರೆ.ಹೌದು ಉಡುಪಿಯಲ್ಲಿ ಒಂದೇಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣ ಕುರಿತಂತೆ ಘಟನೆ ನಡೆದು ನಾಲ್ಕೈದು ದಿನಗಳಲ್ಲಿ ಆರೋಪಿ ಯನ್ನು ಬೆಳಗಾವಿಯಲ್ಲಿ ಬಂಧನ ಮಾಡಲಾಗಿದೆ
ಹೌದು ಬೆಳಗಾವಿಯಲ್ಲಿ ಆರೋಪಿ ಪ್ರವೀಣ್ ಚೌಗಲೆನನ್ನು ಬಂಧನ ಮಾಡಲಾಗಿದೆ.ಇಲ್ಲಿನ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋ ಪಿಯನ್ನು ಬಂಧನ ಮಾಡಲಾಗಿದೆ.ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಅರುಣ್ ಚೌಗಲೆ ಬಂಧಿತ ಆರೋಪಿಯಾಗಿದ್ದು ಉಡುಪಿಯಲ್ಲಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿ ಮನೆಯಲ್ಲಿ ಅಡಗಿ ಕುಳಿತಿದ್ದನು.
ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಬಂಧಿಸಿದ್ದು ಇವನು CISF ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿ ದ್ದರು.ಇನ್ನು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ನಾಜ್ ಗೆ ಪ್ರವೀಣ್ ಪರಿಚಯವಾಗಿತ್ತು. ಇಬ್ಬರು ಪರಸ್ಪರ ಆತ್ಮೀಯವಾಗಿದ್ದರು.ಆದರೆ ನಂತರ ಅಯ್ನಾಜ್ ಆತನಿಂದ ದೂರವಾಗಿದ್ದಳು ಇದರಿಂದ ಕುಪಿತನಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದ್ದು ಈ ಒಂದು ಹಂತಕನ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿತ್ತು ಪೊಲೀಸರು
ಅಯ್ನಾಜ್ ಳಿಗೆ ಚೂರು ಇರಿಯುತ್ತಿದ್ದಾಗ ಆಕೆ ಯನ್ನು ರಕ್ಷಿಸಲು ಬಂದ ತಾಯಿ,ಸಹೋದರಿಗೂ ಪ್ರವೀಣ್ ಚೂರಿ ಇರಿದಿದ್ದಾನೆ.ಇನ್ನು ಮನೆಯಲ್ಲಿ ಗಲಾಟೆಯಾಗುತ್ತಿದ್ದುದ್ದನ್ನು ಗಮನಿಸಿದ ಅಸೀಮ್ ಮನೆಗೆ ಓಡಿ ಬಂದಿದ್ದಾನೆ.ಈ ವೇಳೆ ಅಸೀಮ್ ಗೂ ಚೂರಿ ಇರಿದು ಪ್ರವೀಣ್ ಅಲ್ಲಿಂದ ಪರಾರಿಯಾಗಿದ್ದನು. ಈ ಒಂದು ಪ್ರಕರಣ ರಾಜ್ಯಾ ದ್ಯಂತ ಸಂಚಲನ ಮೂಡಿಸಿತ್ತು.ಇನ್ನು ಆರೋಪಿ ಉಡುಪಿಗೆ ಬಂದಿದ್ದು ಕೆಲ ಸಿಸಿಟಿವಿಯಲ್ಲಿ ಸೆರೆ ಯಾಗಿತ್ತು.
ಇನ್ನು ಪ್ರಕರಣವನ್ನು ಗಂಭೀರವಾಗಿ ತೆಗೆದು ಕೊಂಡ ಉಡುಪಿ ಪೊಲೀಸರು ಕೊನೆಗೂ ಆರೋ ಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಕುಡಚಿ…..