ಬೆಂಗಳೂರು –
ಈ ಹಿಂದೆ ರಾಜ್ಯದಲ್ಲಿ ನಡೆದ ಶಿಕ್ಷಕರ ನೇಮ ಕಾತಿಯಲ್ಲಿನ ಹಗರಣ ಸಾಕಷ್ಟು ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು ಇನ್ನೂ ಈ ಒಂದು ಹಗರಣ ವನ್ನು ಬಗಲಿಗೆ ಎಳೆದವರಿಗೆ ಈಗ ಪೊಲೀಸರು ನೊಟೀಸ್ ನೀಡಿದ್ದಾರೆ.ಈ ಒಂದು ವಿಚಾರದಲ್ಲಿ ಸುದ್ದಿಯ ಮೂಲದ ಮಾಹಿತಿಯನ್ನು ನೀಡುವಂತೆ ಪತ್ರಕರ್ತ ಮಹಾಂತೇಶ್ ಗೆ ಪೊಲೀಸರು ತುರ್ತು ನೊಟೀಸ್ ನೀಡಿದ್ದಾರೆ.
ಹೌದು ದಿ ಫೈಲ್ ತನಿಖಾ ವೆಬ್ಸೈ ಟ್ನಪ ಪತ್ರಕರ್ತ ಜಿ.ಮಹಾಂತೇಶ್ ಅವರಿಗೆ ಸುದ್ದಿಯ ಮೂಲ ವನ್ನು ನೀಡುವಂತೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ.ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಐಡಿಯಿಂದ ಬಂಧನಕ್ಕೆ ಒಳಗಾಗಿ ಅಮಾನತುಗೊಂಡಿದ್ದ ಆರೋಪಿ ಮಾದೇಗೌಡ ಸೇರಿ ಮೂವರು ಅಧಿಕಾರಿಗಳನ್ನು ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ ದಿ ಫೈಲ್ ನವಂಬರ್ 10, 2022ರಂದು ವರದಿ ಪ್ರಕಟಿಸಿತ್ತು.
ಈ ವರದಿಗೆ ಸಂಬಂಧಿಸಿ ತಮ್ಮ ಸಂಸ್ಥೆಗೆ ಸಲ್ಲಿಸಿ ರುವ ಅಥವಾ ಮಾಹಿತಿ ನೀಡಿರುವ ವ್ಯಕ್ತಿಗಳ ವಿವರವನ್ನು ಪ್ರಕರಣದಲ್ಲಿ ತನಿಖೆಯ ಸಲುವಾಗಿ ಸೈಬರ್ ಕ್ರೈಂ ಪೊಲೀಸ್ ಕಚೇರಿಗೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.ಇನ್ನೂ ಉತ್ತರಿಸಿ ರುವ ಪತ್ರಕರ್ತ ಜಿ ಮಹಾಂತೇಶ್ ಸುದ್ದಿಯ ಮೂಲವನ್ನು ಬಿಟ್ಟು ಕೊಡುವುದು ಪತ್ರಿಕಾ ಧರ್ಮವಲ್ಲ ಒಂದು ವೇಳೆ ಅದು ಬಿಟ್ಟುಕೊಟ್ಟರೆ ಪತ್ರಿಕಾ ವೃತ್ತಿಗೆ ಮಾಡುವ ಅವಮಾನ ಎಂದು ಸ್ಪಷ್ಟವಾಗಿ ಉತ್ತರಿಸಿದ್ದಾರೆ.
ಇನ್ನೂ ಈವರೆಗೆ ಈ ಹಗರಣದಲ್ಲಿ 60 ಮಂದಿ ಯನ್ನು ಬಂಧನಕ್ಕೊಳ ಪಡಿಸಲಾಗಿದ್ದು ಅದರಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಾ ಗಿದ್ದ ಮಾದೇಗೌಡರು ಸೇರಿದ್ದು ಇನ್ನೂ ಪ್ರಮುಖ ವಾಗಿ ಶಿಕ್ಷಣ ಇಲಾಖೆಯಲ್ಲಿ ನಡೆದ ದಾಖಲೆ ಸೋರಿಕೆ ಬಗ್ಗೆ ಆಂತರಿಕ ವಿಚಾರಣೆ ನಡೆಸಲಿ ಯಾರು ಸುದ್ದಿ ಮಾಡಿದ್ದಾರೋ ಅವರನ್ನಲ್ಲ ಅದನ್ನು ಬಿಟ್ಟು ಪೊಲೀಸ್ ಇಲಾಖೆ ನಮಗೆ ನೋಟಿಸ್ ನೀಡುವುದಲ್ಲ.
ಇದು ಏನನ್ನು ಸೂಚಿಸುತ್ತದೆ ಅಂದರೆ, ಇದು ಇನ್ಮುಂದೆ ಇಂತಹ ವರದಿಗಳು ಬರೆಯದಂತೆ ಕಿರಿಕಿರಿ ಮಾಡಲು ಮತ್ತು ಇನ್ನೊಂದು ಸ್ವತಂತ್ರ ಪತ್ರಿಕೋದ್ಯಮ’ವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮುಖ್ಯವಾಹಿನಿ ಮಾಧ್ಯಮಗಳನ್ನು ತಮ್ಮ ಹಿಡಿತ ದಲ್ಲಿ ಇಟ್ಟುಕೊಂಡಿರುವುದರಿಂದ ಸ್ವತಂತ್ರ ಪತ್ರಿ ಕೋದ್ಯಮ’ವನ್ನು ಕೂಡ ಹೇಗಾದರೂ ಮಾಡಿ ಬಗ್ಗು ಬಡಿಯಬೇಕೆಂಬುದು ಇದ್ದರೂ ಇರಬ ಹುದು ಎಂದು ದಿ ಫೈಲ್ ಜಿ ಮಹಾಂತೇಶ್ ಹೇಳಿದ್ದು ಮುಂದೇನು ಬೆಳವಣಿಗೆ ಆಗುತ್ತವೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..