ಮಂಗಳೂರು ವಿವಿ‌ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್ ಧರ್ಮ ನೇಮಕ – ಆದೇಶದ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡ ನೂತನ ಕುಲಪತಿ…..

Suddi Sante Desk
ಮಂಗಳೂರು ವಿವಿ‌ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್ ಧರ್ಮ ನೇಮಕ – ಆದೇಶದ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡ ನೂತನ ಕುಲಪತಿ…..

ಮಂಗಳೂರು

ಮಂಗಳೂರು ವಿವಿ‌ ನೂತನ ಕುಲಪತಿಯಾಗಿ ಪ್ರೊ. ಪಿ.ಎಲ್ ಧರ್ಮ ನೇಮಕ – ಆದೇಶದ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡ ನೂತನ ಕುಲಪತಿ ಹೌದು

ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್ ಧರ್ಮ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರುಮಂಗಳೂರು ವಿವಿಗೆ ನೂತನ ಕುಲಪತಿಯಾಗಿ ಪ್ರೊ.ಪಿ.ಎಲ್ ಧರ್ಮ ಅವರನ್ನು ಇಂದು ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಅಧಿಕಾರ ಸ್ವೀಕರಿಸಿದ್ದಾರೆ.

ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಪಿ.ಎಲ್. ಧರ್ಮ ಅವರು ಮಂಗಳೂರು ವಿವಿಯ 10ನೇ ಕುಲ ಪತಿಯಾಗಿದ್ದಾರೆ.ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕುಲಪತಿ ಹುದ್ದೆಗೇರುವ ಅವಕಾಶ ಗಿಟ್ಟಿಸಿಕೊಂಡವರಲ್ಲಿ ಎರಡನೇಯವರು ಪ್ರೊ.ಧರ್ಮ.

ಈ ಹಿಂದೆ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾ ಯರಿಗೆ ಮೊದಲ ಅವಕಾಶ ಸಿಕ್ಕಿತ್ತು. ಪ್ರಭಾರ ಕುಲಪತಿ ಪ್ರೊ.ಜಯರಾಜ ಅಮೀನ್ ಅವರಿಂದ ಅಧಿಕಾರ ಸ್ಪೀಕರಿಸಿದರು. ಪಿ.ಎಲ್.ಧರ್ಮ ಈ ಹಿಂದೆ ಮಂಗಳೂರು ವಿವಿಯ ಕುಲಸಚಿವ( ಮೌಲ್ಯಮಾಪನ)ರಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ಹಿಂದಿನ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡ ಪಡಿತ್ತಾಯ ಅವರ ಅಧಿಕಾರದ ಅವಧಿ ಜೂ.2 , 2023ರಲ್ಲಿ ಕೊನೆಗೊಂಡ ಬಳಿಕ ಮಂಗಳೂರು ವಿವಿ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಡೀನ್ ಪ್ರೊ.ಜಯರಾಜ್ ಅಮೀನ್ ಪ್ರಭಾರ ಕುಲಪತಿ ಯಾಗಿಯಾಗಿದ್ದರು.

ಸುದ್ದಿ ಸಂತೆ ನ್ಯೂಸ್ ಮಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.