ಶಿವಮೊಗ್ಗ –
33 ಶಾಲೆಗಳಿಗೆ ನೋಟಿಸ್ ಶಿಕ್ಷಣ ಇಲಾಖೆ ಅನುಮಾನಕ್ಕೆ ಕಾರಣವಾಯಿತು ನೋಟೀಸ್ ಹಿಂದಿನ ಕಾರಣ ಅದೇನಾ ಹೌದು ಇಂತಹ ದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ
ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಯ ವೇಳೆ ಜಿಲ್ಲಾ ನಿಯಂತ್ರಣ ಕೊಠಡಿ ಯೊಂದಿಗೆ ವೆಬ್ ಕ್ಯಾಸ್ಟಿಂಗ್ ಮೂಲಕ 33 ಪರೀಕ್ಷಾ ಕೇಂದ್ರಗಳ ಸಂಪರ್ಕ ಸಾಧ್ಯವಾಗಿಲ್ಲ.
ಇದು ಅನುಮಾನಕ್ಕೆ ಕಾರಣವಾಗಿದೆ.
ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದು ಕೊಂಡಿದ್ದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ 33 ಶಾಲೆಗಳಿಗೆ ಕಾರಣ ಕೇಳಿದೆ.ಇದು ಹಲವಾರು ಅನುಮಾನ ಗಳಿಗೆ ಕಾರಣವಾಗಿದ್ದು ಇನ್ನೂ
ಈ ಒಂದು ನೋಟೀಸ್ ನ್ನು ಇಲಾಖೆ ಶಾಲೆ ಗಳಿಗೆ ನೀಡುತ್ತಿದ್ದಂತೆ ಇತ್ತ ಶಾಲೆಗಳಿಂದ ಉತ್ತರ ಗಳು ಬಂದಿದ್ದು ನಮ್ಮಲ್ಲಿ ಕರೆಂಟ್ ಇರಲಿಲ್ಲ. ಇಂಟರ್ ನೆಟ್ ಬಿಲ್ ಪಾವತಿಸಿ ರಲಿಲ್ಲ. ವೆಬ್ ಕ್ಯಾಸ್ಟಿಂಗ್‌ಗೆ ಸಂಪರ್ಕ ಕಲ್ಪಿಸಲು ತಾಂತ್ರಿಕ ತೊಂದರೆ ಎದುರಾಗಿತ್ತು.
ಸಿ.ಸಿ. ಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ, ಪಾಸ್‌ವರ್ಡ್ ತಪ್ಪಾಗಿತ್ತು. ಲಾಗಿನ್ ಆಗಲು ಸಾಧ್ಯ ವಾಗಲಿಲ್ಲ, ಸಿ.ಸಿ. ಟಿವಿಗೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಲಭ್ಯವಿರಲಿಲ್ಲ, ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇರಲಿಲ್ಲ,ಡಿಸ್‌ಪ್ಲೇ ಲಭ್ಯವಿರ ಲಿಲ್ಲ, ಸಿ.ಸಿ. ಟಿವಿ ಕ್ಯಾಮೆರಾಗೆ ಡಿವಿಆರ್ ಇರಲಿಲ್ಲ. ನಾಲ್ಕು ಕೊಠಡಿಗಳಲ್ಲಿ ಮಾತ್ರ ಸಿ.ಸಿ ಟಿವಿ ಕ್ಯಾಮೆರಾ ಇದ್ದು ಉಳಿದ ಕೊಠಡಿಗಳಲ್ಲಿ ಇರಲಿಲ್ಲ ಎಂಬ ಕಾರಣಗಳನ್ನು ಸದರಿ ಶಾಲೆಯವರು ಕೊಟ್ಟಿದ್ದಾರೆ.
ಸಧ್ಯಕ್ಕೆ ಇಲಾಖೆ ಈ ಒಂದು ಉತ್ತರ ಗಳನ್ನು ತಗೆದು ಕೊಂಡಿದ್ದು ಇಲಾಖೆ ಮುಂದೇನು ಯಾವ ಕ್ರಮಗಳನ್ನು ತಗೆದುಕೊಳ್ಳುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..