ಚಿತ್ರದುರ್ಗ –
ಜಾಬ್ ಕಾರ್ಡ್ ಮಾಡಿಸಲು ಹಾಗೇ ಜಮೀನಿನ ಇ ಸ್ವತ್ತನ್ನು ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ PDO ಒಬ್ಬರು ACB ಬಲೆಗೆ ಬಿದ್ದ ಘಟನೆ ಚಿತ್ರದುರ್ಗ ದಲ್ಲಿ ನಡೆದಿದೆ.ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಪಿಡಿಓ ಶ್ರೀನಿವಾಸ್ ಅವರು ಟ್ರ್ಯಾಪ್ ಆಗಿದ್ದಾರೆ.ರೈತ ಗುರುಶಾಂತಪ್ಪ ಅವರಿಗೆ ಜಾಬ್ ಕಾರ್ಡ್ ಮಾಡಲು 3000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಅರಿತ ಇವರು ಎಸಿಬಿ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು.ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು PDO ಅವರನ್ನು ಟ್ರ್ಯಾಪ್ ಮಾಡಿದ್ದಾರೆ

ಮೂರು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇವರು ಇಂದು ಎರಡು ಸಾವಿರ ರೂಪಾಯಿ ಹಣವನ್ನು ತಗೆದುಕೊಳ್ಳುವಾಗ ಟ್ರ್ಯಾಪ್ ಮಾಡಲಾ ಗಿದೆ.ಎಸಿಬಿ ಎಸ್ಪಿ ಜಯಪ್ರಕಾಶ್ ಇವರ ಮಾರ್ಗ ದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ನಡೆ ದಿದೆ.ಇವರೊಂದಿಗೆ ಬಸವರಾಜ್ ಮಗದುಮ್, ಪ್ರವೀಣ್ ಕುಮಾರ್,ಸಿಬ್ಬಂದಿ ಗಳಾದ ಶ್ರೀನಿವಾಸ್, ಮಾರುತಿರಾಮ್,

ಓಬಣ್ಣ,ಫಕೃದ್ದಿನ್,ಹರೀಶ್ ಕುಮಾರ್, ಯತಿರಾಜ, ಫಯಾಜ್,ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಇನ್ನೂ ಅಧಿಕಾರಿಯ ಮನೆಯ ಶೋಧನಾ ಕಾರ್ಯವನ್ನು ಪಿಐ ಅಧಿಕಾರಿ ಆಂಜನೇಯ ಅವರು ಮಾಡಿದರು.