ಬೆಂಗಳೂರು –
ಕೇಂದ್ರ ಸರ್ಕಾರ ಮಾದರಿಯಲ್ಲಿನ 7ನೇ ವೇತನ ಆಯೋಗ ವನ್ನು ರಾಜ್ಯದ ಸರ್ಕಾರಿ ನೌಕರರಿಗೆ ನೀಡಲು ರಾಜ್ಯ ಸರ್ಕಾರ ನಿರ್ಧಾರವನ್ನು ಮಾಡಿದ್ದು ಈಗಾಗಲೇ ರಾಜ್ಯದ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಸೇರಿದಂತೆ ಹಲವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈಗಾಗಲೇ ಮನವಿಯನ್ನು ನೀಡಿದ್ದು ಹೀಗಾಗಿ ಇದರ ಬೆನ್ನಲ್ಲೇ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಇದನ್ನು ಅಲ್ಲಿನ ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದು ಹೀಗಾಗಿ ನಮ್ಮ ರಾಜ್ಯದಲ್ಲೂ ನೀಡಲು ಮುಂದಾಗಿದ್ದು ಈ ಕುರಿತಂತೆ ಈಗಾಗಲೇ ಸಿದ್ದತೆಯನ್ನು ಮಾಡಿಕೊಂಡಿದ್ದು ಮಾರ್ಚ್ 4 ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಘೋಷಣೆ ಯಾಗಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ

ರಾಜ್ಯಾಧ್ಯಕ್ಷ ಷಡಾಕ್ಷರಿ ಅವರೇ ಈ ಒಂದು ವಿಚಾರವನ್ನು ಹೇಳಿದ್ದಾರೆ. ಈಗಾಗಲೇ ದೇಶದ 25 ರಾಜ್ಯಗಳಲ್ಲಿ ಈ ಒಂದು ಕೇಂದ್ರ ಸರ್ಕಾರದ ಮಾದರಿಯಲ್ಲಿನ ವೇತನವನ್ನು ನೀಡಲಾಗುತ್ತಿದ್ದು ಹೀಗಾಗಿ ರಾಜ್ಯದಲ್ಲೂ ಈ ಬಾರಿ ಜಾರಿಗೆ ಬರಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ನಲ್ಲಿ ಘೋಷಣೆಯನ್ನು ಮಾಡಲಿದ್ದಾರೆ.