ಬೆಂಗಳೂರು –
ರಾಜ್ಯದ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ ಯನ್ನು ನೀಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಶೀಘ್ರದಲ್ಲೇ ಅಧಿಕೃತ ವಾದ ಆದೇಶವನ್ನು ಹೊರಡಿಸಲಿದೆ ಹೌದು ಕೊರೊನಾ ಕಾರಣದಿಂದ ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.ಶಾಲೆ ಬಿಟ್ಟವರ ಪೈಕಿ ಅರ್ಧಕ್ಕಿಂತ ಕಡಿಮೆ ಮಕ್ಕಳು ಮಾತ್ರ ಶಾಲೆಗೆ ವಾಪಸ್ ಆಗಿದ್ದಾರೆ.ಇನ್ನು ಉಳಿದವರನ್ನು ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಸವಾಲಾಗಿದೆ.ಇನ್ನೂ ಕೊರೊನಾ ಮಕ್ಕಳಲ್ಲಿ ಕಾಣಿಸಿಕೊಳ್ಳು ತ್ತಿದ್ದ ಹಿನ್ನೆಲೆ ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ಬಂದ್ ಮಾಡಿಸಿತ್ತು.ಸದ್ಯ ಕೊರೊನಾ ಕಡಿಮೆಯಾದ ಹಿನ್ನೆಲೆ ಮತ್ತೆ ಶಾಲೆಗಳನ್ನು ತೆರೆಯಲಾಗಿದೆ.ಆದ್ರೆ ಮಕ್ಕಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.ಅನೇಕ ಮಕ್ಕಳು ಶಾಲೆಗಳ ಮೇಲೆ ಒಲವು ಕಳೆದುಕೊಂಡಿದ್ದಾರೆ.ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಬೆಂಗಳೂರು ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ಜಿಲ್ಲೆಗಳೇ ಮೊದಲು ಆಗಿದ್ದು ಮಕ್ಕಳ ಪತ್ತೆ ಮಾಡುವ ಕೆಲಸಕ್ಕೆ ಇಲಾಖೆ ಮುಂದಾಗಿದ್ದು ಶೀಘ್ರದಲ್ಲೇ ಅಧಿಕೃತ ವಾದ ಆದೇಶ ವೊಂದು ಹೊರಬೀಳಲಿದೆ

ಈ ಶೈಕ್ಷಣಿಕ ಜಿಲ್ಲೆಗಳಲ್ಲಿ 6 ರಿಂದ 14 ವಯೋಮಿತಿಯ 2,143 ಮಕ್ಕಳು ಹಾಗೂ 14 ರಿಂದ 16 ವರ್ಷ ವಯೋ ಮಿತಿಯ 4,465 ಸೇರಿ ಬರೋಬ್ಬರಿ 6,608 ಮಕ್ಕಳು ಶಾಲೆಯನ್ನ ಅರ್ಧಕ್ಕೆ ಬಿಟ್ಟಿದ್ದಾರೆ.ಇನ್ನೂ ಶಾಲೆಬಿಟ್ಟ 34,411 ಮಕ್ಕಳ ಪೈಕಿ 15,552 ಮಕ್ಕಳು ವಾಪಸ್ ಆಗಿದ್ದು ಉಳಿದ ಮಕ್ಕಳನ್ನ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಯತ್ನಿಸುತ್ತಿದೆ.ಇದರ ನಡುವೆ ಸರ್ಕಾರಿ ಶಾಲೆಗಳ ಅಂಕಿ ಅಂಶ ಕಂಡು ಶಿಕ್ಷಣ ಇಲಾಖೆಯೇ ತಬ್ಬಿಬ್ಬಾಗಿದ್ದು 1 ರಿಂದ 10ನೇ ತರಗತಿ ಮಕ್ಕಳ ಸರ್ವೇಯಲ್ಲಿ ಅಂಕಿ ಅಂಶ ಬೆಳಕಿಗೆ ಬಂದಿತ್ತು. ಸದ್ಯ ಮಕ್ಕಳ ಪತ್ತೆ ಹಚ್ಚುವ ಕೆಲಸದಲ್ಲಿ ಶಿಕ್ಷಣ ಇಲಾಖೆ ತೊಡಗಿದ್ದು ಇದನ್ನು ಶಿಕ್ಷಕರಿಗೆ ಜವಾಬ್ದಾರಿ ನೀಡಲು ಮುಂದಾಗಿದ್ದು ಶೀಘ್ರದಲ್ಲೇ ಈ ಒಂದು ಕುರಿತು ಅಧಿಕೃತವಾದ ಆದೇಶವೊಂದು ಹೋರಬೀಳಲಿದೆ.