ಬೆಂಗಳೂರು –
ಸಧ್ಯ ರಾಜ್ಯದ ಶಾಲೆಗಳಲ್ಲಿ ಪದವೀಧರ ಶಿಕ್ಷಕರಿದ್ದರು ಕೂಡಾ ರಾಜ್ಯ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 6 ರಿಂದ 8 ನೇ ತರಗತಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದ್ದು, ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳು ವಂತೆ ಶಿಕ್ಷಣ ಇಲಾಖೆ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್ ಅವರು ಡಿಡಿಪಿಐಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು ಕಲ್ಯಾಣ ಕರ್ನಾಟಕದ 6 ಶೈಕ್ಷಣಿಕ ಜಿಲ್ಲೆಗಳ ಶಾಲೆಗಳಿಗೆ ಒಟ್ಟು 5000 ಹುದ್ದೆಗಳು ಹಾಗೂ ಉಳಿದ 28 ಜಿಲ್ಲೆಗಳಿಗೆ 10,000 ಸೇರಿ 15 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದೇಶವನ್ನು ಹೊರಡಿಸಲಿದೆ

ಡಿಡಿಪಿಐಗಳ ಹಂತದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಅಗತ್ಯ ಪೂರ್ವ ಸಿದ್ಧತೆಗಳಿಗೆ ಕ್ರಮ ವಹಿ ಸಲು ಹೇಳಿದ್ದಾರೆ.ಡಿಡಿಪಿಐಗಳು ತಮ್ಮ ವ್ಯಾಪ್ತಿಯ ಶಾಲೆಗ ಳಲ್ಲಿನ 6 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಿಕ್ಷಣ ಹಕ್ಕು ಕಾಯ್ದೆ ನಿಯಮಾನುಸಾರ ವಿಷಯವಾರು ಶಾಲಾವಾರು ತಾಲೂಕುವಾರು ಹುದ್ದೆಗ ಳನ್ನು ವರ್ಗೀಕರಣ ಮಾಡಿ ಗುರುತಿಸಿಕೊಂಡು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ಇನ್ನೂ ಈಗಾಗಲೇ ಪದವೀಧರ ಶಿಕ್ಷಕರ ಭವಿಷ್ಯ ಏನು ಎಂಬ ಚಿಂತೆ ಆತಂಕ ಎದುರಾಗಿದ್ದು ತಿಳಿಯಲಾರದಂತಾಗಿದೆ.ಇಲಾಖೆಯಲ್ಲಿ ಸಧ್ಯ ಸಾಕಷ್ಟು ಪ್ರಮಾಣದಲ್ಲಿ ಪದವಿಗಳನ್ನು ಮುಗಿಸಿ ಕೊಂಡು ಕರ್ತವ್ಯ ವನ್ನು ಮಾಡತಾ ಇದ್ದಾರೆ ಇವರಿಗೆ ಸೇವಾ ಆಧಾರದ ಮೇಲೆ ಬಡ್ತಿ ನೀಡಬೇಕು ಆದರೆ ಇದ್ಯಾವುದನ್ನು ಗಮನಿಸಿದ ಇಲಾಖೆ ಸಂಘಟನೆಯವರು ಪ್ರಶ್ನೆ ಮಾಡುವ ಬದಲಿಗೆ ಮೌನವಾಗಿದ್ದಾರೆ ಹೀಗಾಗಿ ಅತಂತ್ರದಲ್ಲಿ ನಾಡಿನ ಶಿಕ್ಷಕರಿದ್ದಾರೆ.