ದುಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಹಳೇಯ ವಿದ್ಯಾರ್ಥಿಗಳು ಸರ್ಕಾರ ಜನ ಪ್ರತಿನಿಧಿಗಳು ಮಾಡುವ ಕೆಲಸವನ್ನು ಹಳೆಯ ವಿದ್ಯಾರ್ಥಿ ಗಳು ಮಾಡಿದರು…..

Suddi Sante Desk

ಕೋಲಾರ –

ಇದೊಂದು ದುಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆ ಯೊಂದಕ್ಕೆ ಮರು ಜೀವ ನೀಡಿದ ಚಿತ್ರಣ.ಹೌದು ಕೋಲಾರದ ಚಿಕ್ಕಅಂಕಂಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹರೀಶ್ ಎಂಬಾತ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದು ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಸ್ಥಿತಿಯಲ್ಲಿದ್ದ ಶಾಲೆಯನ್ನು ಸರಿಪಡಿಸಿ ನಂತರ ತನ್ನ ವೈಯಕ್ತಿಕ ಹಣದಿಂದ ಶಾಲೆಗೆ ಸುಣ್ಣಬಣ್ಣ ಮಾಡಿ ಮಕ್ಕಳಿಗೆ ಆಕರ್ಷಕವಾಗಿ ಕಂಡು ಬರುವ ರೀತಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.ಶಿಥಿಲಾವಸ್ಥೆ ತಲುಪಿದ್ದ ಸರ್ಕಾರಿ ಶಾಲೆಯ ದುಸ್ಥಿತಿ ಕಂಡು ಮಕ್ಕಳು ಶಾಲೆಗೆ ಬರುವುದಿರಲಿ ಪೊಷಕರು ಕೂಡಾ ತಮ್ಮ ಮಕ್ಕಳ ನ್ನು ಶಾಲೆಗೆ ಕಳಿಸಲು ಹಿಂದು ಮುಂದು ನೋಡುವಂತಾ ಗಿತ್ತು.ಇಂಥ ಪರಿಸ್ಥಿತಿ ತಲುಪಿದ್ದ ಶಾಲೆ.ತನ್ನ ದುಸ್ಥಿತಿಯನ್ನು ತಾನೇ ಸರಿಪಡಿಸಿಕೊಂಡು ಸುಸ್ಥಿತಿಗೆ ತಲುಪಿದೆ.ಅಲ್ಲದೆ ನೋಡುವವರ ಕಣ್ಣು ಕುಕ್ಕುವ ರೀತಿಯಲ್ಲಿ ಜಗಮಗಿಸು ತ್ತಿದೆ.ತಾನು ಓದಿದ್ದ ಸರ್ಕಾರಿ ಶಾಲೆಗೆ ಹಳೆಯ ವಿದ್ಯಾರ್ಥಿ ಯಿಂದ ಕಾಯಕಲ್ಪ ದೊರೆತಿದೆ. ಕಲರ್ ಪುಲ್ ಆಗಿ ಮಿನು ಗುತ್ತಿರುವ ಸರ್ಕಾರಿ ಶಾಲಾ ಕಟ್ಟಡ.ಬುಲೆಟ್ ಟ್ರೈನ್ ರೀತಿ ಯಲ್ಲಿ ವಿಭಿನ್ನವಾಗಿ ಕಂಡು ಬರುತ್ತಿರುವ ಶಾಲೆಯಲ್ಲಿ ಮಕ್ಕಳ ಕಲರವ ಇಂಥಾದೊಂದು ದೃಶ್ಯಗಳು ಸಧ್ಯ ಬಂಗಾರಪೇಟೆ ತಾಲ್ಲೂಕು ಚಿಕ್ಕಅಂಕಂಡಹಳ್ಳಿ ಗ್ರಾಮದಲ್ಲಿ.

ಹೌದು ಈಗ್ರಾಮದಲ್ಲಿ ಒಂದರಿಂದ ಐದನೇ ತರಗತಿವರೆಗೆ ಅಂದರೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ.ಈ ಶಾಲೆ ಹಲವು ವರ್ಷಗಳಿಂದ ಸರಿಯಾದ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿತ್ತು.ಇಂಥ ಪರಸ್ಥಿತಿಯಲ್ಲಿದ್ದ ಶಾಲೆಯ ಸ್ಥಿತಿಯನ್ನು ಕಂಡ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ತನ್ನ ಜವಾಬ್ದಾರಿ ಕಾಳಜಿ ಹಾಗೂ ವೈಯಕ್ತಿಕ ಹಣದಿಂದ ಇಂದು ಶಾಲೆಯನ್ನು ಜಗಮಗಿಸುವಂತೆ ಮಾಡಿದ್ದಾನೆ.

ಇದೇ ಚಿಕ್ಕಅಂಕಂಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹರೀಶ್ ಎಂಬಾತ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷನಾಗಿದ್ದು ಪಂಚಾಯ್ತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದುಸ್ಥಿತಿಯಲ್ಲಿದ್ದ ಶಾಲೆಯನ್ನು ಸರಿಪಡಿಸಿ ನಂತರತನ್ನ ವೈಯಕ್ತಿಕ ಹಣದಿಂದ ಶಾಲೆಗೆ ಸುಣ್ಣಬಣ್ಣ ಮಾಡಿ ಮಕ್ಕಳಿಗೆ ಆಕರ್ಷಕವಾಗಿ ಕಂಡು ಬರುವ ರೀತಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.ಈ ಮೂಲಕ ನಮ್ಮೂರಿನ ಶಾಲೆಯ ಪರಿಸ್ಥಿತಿ ಸರಿಹೋದ ಮೇಲೆ ಈಗ ನಮ್ಮೂರಿನ ಶಾಲೆಯಿಂದ ಶಾಲೆಯೇ ಬೇಡ ಎಂದು ಶಾಲೆ ತೊರೆದು ಹೋಗಿದ್ದ ಮಕ್ಕಳು ಈಗ ಮತ್ತೆ ಶಾಲೆಗೆ ಬಂದು ದಾಖಲಾಗುತ್ತಿದ್ದಾರೆ ಎಂದು ಹರೀಶ್ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಅಂಕಂಡಹಳ್ಳಿ ಸರ್ಕಾರಿ ಶಾಲೆ ಮೊದಲು ಮಳೆ ಬಂದರೆ ಸೋರುವ ಸ್ಥಿತಿ ಇತ್ತು ಆದರೆ ಈಗ ಅದರ ಸ್ಥಿತಿಯೇ ಬದಲಾಗಿ ಹೋಗಿದೆ ಹೊರಗಿನಿಂದ ನೋಡಿದರೆ ಬುಲೆಟ್ ಟ್ರೈನ್ ರೀತಿಯಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗಿದೆ ಶಾಲೆಯ ಹೊರ ನೋಟ ಬುಲೆಟ್ ಟ್ರೈನ್ ರೀತಿ ಕಂಡು ಬಂದರೆ, ಓಳಗೆ ಮಕ್ಕಳ ಕಲಿಕೆಗೆ ಅನುಕೂಲ ವಾಗುವ ರೀತಿಯಲ್ಲಿ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲೆಯನ್ನು ಬಿಡಿಸಲಾಗಿದ್ದು ಶಾಲೆಗೆ ಬರುವ ಮಕ್ಕಳಿಗೆ ಇದೊಂದು ಹೊಸ ಅನುಭವ ನೀಡು ತ್ತಿದೆ.ಹಾಗಾಗಿ ಶಾಲೆಗೆ ಬರುವ ಮಕ್ಕಳು ಸಂತೋಷದಿಂದ ಶಾಲೆಗೆ ಬಂದು ಕಲಿಯುತ್ತಿದ್ದಾರೆ ಅಲ್ಲದೆ ಶಾಲೆ ಸರಿ ಇಲ್ಲ ಎಂದು ಶಾಲೆ ತೊರೆದು ಹೋಗಿದ್ದ ಮಕ್ಕಳು ಈಗ ಮತ್ತೆ ಇದೇ ಶಾಲೆಗೆ ಬಂದು ದಾಖಲುಗುತ್ತಿದ್ದಾರೆ ಸುಣ್ಣ ಬಣ್ಣ ಮಾಡಿದ ಮೇಲೆ ಶಾಲೆಗೆ ಬರುವುದಕ್ಕೆ ಖುಷಿಯಾಗುತ್ತೆ ಎನ್ನುತ್ತಾಳೆ ಈ ಶಾಲಾ ವಿದ್ಯಾರ್ಥಿನಿ ವೈಷ್ಣವಿ

ನಮ್ಮೂರು ನಮ್ಮ ಶಾಲೆ ಅನ್ನೋ ಮೂಲಕ ಪ್ರತಿಯೊಬ್ಬ ಅನುಕೂಲವಂತರು ತಮ್ಮೂರಿನ ವಿದ್ಯಾ‌ ಕೇಂದ್ರಗಳನ್ನು ಅಭಿವೃದ್ದಿ ಪಡಿಸಿದ್ದೇ ಆದರೆ ನಿಜಕ್ಕೂ ಶಾಲೆಯಿಂದ ದೂರ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ.ಎಲ್ಲದ ಕ್ಕಿಂತ ಪ್ರಮುಖವಾಗಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲೇ ಸಿಗುವಂತಾದರೆ ಸಾಮಾನ್ಯ ಜನರನ್ನು ಶಿಕ್ಷಣದ ಹೆಸರಲ್ಲಿ ಸುಲಿಗೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸುಲಿಗೆ ಆಟಕ್ಕೂ ಕಡಿವಾಣ ಬೀಳೋದ್ರಲ್ಲಿ ಅನುಮಾನವಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.