ಎದುರಿಗೆ ಬಂದ ವಾಹನ ತಪ್ಪಿಸಲು ಹೋಗಿ ಪಲ್ಟಿಯಾಯಿತು ಲಾರಿ ರಸ್ತೆಯಲ್ಲಿ ಚಲ್ಲಾಪಿಲ್ಲಿಯಾದ ಪ್ರೀಜ್ ಗಳು ಬೆಳ್ಳಂ ಬೆಳಿಗ್ಗೆ ತಪ್ಪಿತು ದೊಡ್ಡ ಅವಘಡ

Suddi Sante Desk

ರೋಣ –

ಹುಬ್ಬಳ್ಳಿಯಿಂದ ರಾಯಚೂರಿಗೆ ಪ್ರೀಜ್ ಗಳನ್ನು ತುಂಬಿಕೊಂಡು ಹೊರಟಿದ ಸರಕು ಲಾರಿಯೊಂದು ಪಲ್ಟಿಯಾದ ಘಟನೆ ರೋಣ ತಾಲ್ಲೂಕಿನ ಬೆಳವಣಿಗೆ ಗ್ರಾಮದ ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಹೊರಟಿದ್ದ ಸರಕು ತುಂಬಿದ ಈ ಒಂದು ಲಾರಿ ಬೆಳವಣಿಕೆ ಗ್ರಾಮದ ಬಳಿ ಎದುರು ಒಂದು ವಾಹನ ಬಂದಿದೆ.ಇನ್ನೂ ಅಪಘಾತವಾಗುತ್ತದೆ ಎಂದುಕೊಂಡ ಚಾಲಕ ಲಾರಿಯನ್ನು ಪಕ್ಕಕ್ಕೆ ತಗೆದುಕೊಂಡಿದ್ದಾರೆ.

ಪಕ್ಕಕ್ಕೆ ತಗೆದುಕೊಳ್ಳುತ್ತಲೆ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಇನ್ನೂ ಲಾರಿಯಲ್ಲಿದ್ದ ಎಲ್ಲಾ ಪ್ರೀಜ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ‌‌. ಬೆಳ್ಳಂ ಬೆಳಿಗ್ಗೆ ದೊಡ್ಡ ಪ್ರಮಾಣದ ಅವಘಡವೊಂದು ತಪ್ಪಿದಂತಾಗಿದೆ

ಇನ್ನೂ ಲಕ್ಷಾಂತರ ರೂಪಾಯಿ ಮೌಲ್ಯದ ಪ್ರೀಜ್ ಗಳು ಹಾಳಾಗಿದ್ದು ಅಪಘಾತದ ಸುದ್ದಿ ತಿಳಿದ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.