ನವದೆಹಲಿ –
ಈ ತಕ್ಷಣದಿಂದಲೇ ಶಾಲಾ ವಿದ್ಯಾರ್ಥಿಗಳ ಆನ್ ಲೈನ್ ಮತ್ತು ಸೆಮಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ನವದೆಹಲಿಯ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಏಪ್ರಿಲ್ 20 ರಿಂದಲೇ ಬೇಸಿಗೆ ರಜೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ತರಗತಿ ನಿಲ್ಲಿಸುವಂತೆ ಹೇಳಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ಶಾಲೆಗಳ ಬೇಸಿಗೆ ರಜೆಯನ್ನು ಮೇ 11ರ ಬದಲಾಗಿ ಏಪ್ರಿಲ್ 20ರಿಂದಲೇ ಆರಂಭಿಸುತ್ತಿ ರುವುದಾಗಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಜೂನ್ 9ರವರೆಗೆ ಬೇಸಿಗೆ ರಜೆ ಇರಲಿದೆ. ಈ ಸಮಯದಲ್ಲಿ ಶಾಲೆಗಳು ಕೇವಲ ಬೇಸಿಗೆ ರಜೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾತ್ರವೇ ವಿದ್ಯಾರ್ಥಿಗಳಿಂದ ಮಾಡಿಸಬೇಕು.

ಬೇರೆ ತರಗತಿಗಳನ್ನು ತಕ್ಷಣ ನಿಲ್ಲಿಸಬೇಕೆಂದು ಆದೇ ಶದಲ್ಲಿ ತಿಳಿಸಲಾಗಿದೆ.ನವದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 19 ರಿಂದ 26 ರವರೆಗೆ ಲಾಕ್ ಡೌನ್ ಘೋ ಷಣೆ ಮಾಡಲಾಗಿದೆ. ಉಳಿದಂತೆ ಬೇರೆ ರಾಜ್ಯಗಳ ಲ್ಲೂ ಸೋಂಕು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು