ಪುತ್ತೂರು –
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ವಸತಿಯುತ ಶಿಕ್ಷಣ ಕ್ಕಿರುವ ಉಡುಪಿ ತಾಲೂಕಿನ ಪುತ್ತೂರಿನ ಏಕೈಕ ಸರಕಾರಿ ಆಶ್ರಮ ಶಾಲೆಯಲ್ಲಿ ಈಗ ಇರುವುದು ಒರ್ವ ವಿದ್ಯಾರ್ಥಿ ಮಾತ್ರ.ವರ್ಷದಿಂದ ವರ್ಷಕ್ಕೆ ವಸತಿಯುತ ಶಾಲೆಗಳ ಪೈಕಿ ಆಶ್ರಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಇಳಿ ಮುಖವಾಗುತ್ತಿದ್ದು ಇದೇ ತೆರನಾಗಿ ಸಾಗಿದರೆ ಬೀಗ ಜಡಿ ಯುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ವಾಲ್ಮೀಕಿ ಆಶ್ರಮ ಶಾಲೆಯ ಸಧ್ಯದ ಚಿತ್ರಣ
ಪುತ್ತೂರು ತಾಲೂಕಿಗೆ ಸಂಬಂಧಿಸಿ ಬಲ್ನಾಡಿನ ಸಾಜದಲ್ಲಿ 1960ರಲ್ಲಿ ಪರಿಶಿಷ್ಟ ವರ್ಗದ ವಾಲ್ಮೀಕಿ ಆಶ್ರಮ ಶಾಲೆ ತೆರೆಯಲಾಗಿತ್ತು.75 ವಿದ್ಯಾರ್ಥಿಗಳ ಬಲ ಹೊಂದಿರುವ ವಸತಿಯುತ ಶಾಲೆ ಇದಾಗಿದ್ದು ಇಲ್ಲಿ 1ರಿಂದ 5ನೇ ತರಗತಿ ತನಕ ವ್ಯಾಸಂಗಕ್ಕೆ ಅವಕಾಶ ಇದೆ.ಶೇ.50ರಷ್ಟು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಉಳಿದ ಶೇ. 50ರಲ್ಲಿ ಎಸ್‌ಸಿ, ಇತರ ವರ್ಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹತೆ ಹೊಂದಿದ್ದಾರೆ.ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶಿಕ್ಷಕರು,ಅಡುಗೆ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ವಸತಿ ಸಹಿತ ಊಟ,ಉಪಹಾರ ವ್ಯವಸ್ಥೆ ಈ ಶಾಲೆಗಳಲ್ಲಿ ನೀಡಲಾಗುತ್ತದೆ.ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂವರು ವಿದ್ಯಾರ್ಥಿಗಳಿದ್ದರು.ಇವರ ಪೈಕಿ ಇಬ್ಬರು ಐದನೇ ತರಗತಿ ಪೂರ್ಣಗೊಳಿಸಿ ಬೇರೆ ಶಾಲೆಗೆ ತೆರಳಿದ್ದಾರೆ.ಓರ್ವ ವಿದ್ಯಾರ್ಥಿ ನಾಲ್ಕನೇ ತರಗತಿಯಿಂದ ಉತೀರ್ಣಗೊಂಡು ಐದನೇ ತರಗತಿಗೆ ತೇರ್ಗಡೆಗೊಂಡಿದ್ದಾರೆ.ಹೀಗಾಗಿ ಪ್ರಸ್ತುತ ಓರ್ವ ವಿದ್ಯಾರ್ಥಿ ಮಾತ್ರ ಉಳಿದುಕೊಂಡಿದ್ದಾರೆ.ಏಳೆಂಟು ವರ್ಷಗಳ ದಾಖಲಾತಿ ಅಂಕಿ ಅಂಶ ಗಮನಿಸಿದರೆ ದಾಖ ಲಾತಿ ಪ್ರಮಾಣ ಹತ್ತು ದಾಟುತ್ತಿಲ್ಲ.ಈ ಬಾರಿ ಕೂಡ ಹೊಸ ದಾಗಿ ದಾಖಲಾತಿಯಾದಲ್ಲಿ ಮಾತ್ರ ವಿದ್ಯಾರ್ಥಿ ಸಂಖ್ಯೆ ಏರಿಕೆ ಕಾಣಲಿದೆ.