ಚಿಕ್ಕಮಗಳೂರು –
ಶಾಲೆಯಲ್ಲಿದ್ದ ಒಬ್ಬರೇ ಶಿಕ್ಷಕರು ವರ್ಗಾವಣೆ – ಸಿಡಿದೆದ್ದ ವಿದ್ಯಾರ್ಥಿಗಳು ಪೋಷಕರು ಪ್ರತಿಭಟನೆ…..ಹೌದು
ಶಾಲೆಯಲ್ಲಿದ್ದ ಒಬ್ಬ ಒಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಶಾಲೆಯಲ್ಲಿದ್ದ ಒಬ್ಬರೇ ಶಿಕ್ಷಕ ವರ್ಗಾವಣೆಯಿಂದಾಗಿ ವಿದ್ಯಾರ್ಥಿಗಳು-ಪೋಷಕರು ಪ್ರತಿಭಟನೆ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಶಾಲೆಯಲ್ಲಿದ್ದ ಒಬ್ಬರೇ ಶಿಕ್ಷಕರು ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ, ಟೀಚರ್ ಇಲ್ಲವೆಂದು ಮಕ್ಕಳು ಮತ್ತು ಪೋಷಕರು ಬಿಇಓ ಕಚೇರಿ ಮುಂದೇ ಕುಳಿತುಕೊಂಡು ಪ್ರತಿಭಚಟನೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಚಿಕ್ಕಮಗಳೂರು ತಾಲೂಕು ಮೇಲಿನ ಹುಲುವತ್ತಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಇದ್ದು ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿದ್ದರು.
ಈಗ ಆ ಶಿಕ್ಷಕರು ವರ್ಗಾವಣೆಗೊಂಡಿದ್ದಾರೆ. ಬೇರೆ ಶಿಕ್ಷಕರು ಬರುವ ಮುನ್ನವೇ ಇದ್ದ ಒಬ್ಬ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಶಾಲೆಗೆ ಹೊಸ ಶಿಕ್ಷಕರು ಬರುವ ಮುನ್ನವೇ ಇದ್ದ ಶಿಕ್ಣಕರನ್ನು ಹೇಗೆ ರಿಲೀವ್ ಮಾಡಿದ್ದೀರಿ ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸಿದ್ದು ಕೂಡಾ ಕಂಡು ಬಂದಿತು.
ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ಒಂಬತ್ತು ವಿದ್ಯಾರ್ಥಿ ಗಳು ಇದ್ದು ಅವರಿಗೆ ಪಾಠ ಮಾಡುವವರು ಯಾರು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಸಧ್ಯ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..