ಹಳ್ಳ ಹಿಡಿದು ಹಾಳಾದ ಕೆಲಗೇರಿಯ ಓಪನ್ ಜಿಮ್ – ಒಂದೂವರೆ ವರ್ಷವಾಗಿಲ್ಲ ಕೋಟ್ಯಾಂತರ ರೂಪಾಯಿಯ ಕೆರೆಯ ಜಿಮ್ ಹೇಗಾಗಿದೆ ನೋಡ್ರಿ ಪಾಲಿಕೆಯವರಿಗೆ ಇದನ್ನು ನೋಡಲು ಟೈಮ್ ಇಲ್ಲ…..

Suddi Sante Desk
ಹಳ್ಳ ಹಿಡಿದು ಹಾಳಾದ ಕೆಲಗೇರಿಯ ಓಪನ್ ಜಿಮ್ – ಒಂದೂವರೆ ವರ್ಷವಾಗಿಲ್ಲ ಕೋಟ್ಯಾಂತರ ರೂಪಾಯಿಯ ಕೆರೆಯ ಜಿಮ್ ಹೇಗಾಗಿದೆ ನೋಡ್ರಿ ಪಾಲಿಕೆಯವರಿಗೆ ಇದನ್ನು ನೋಡಲು ಟೈಮ್ ಇಲ್ಲ…..

ಧಾರವಾಡ

ಹಳ್ಳ ಹಿಡಿದು ಹಾಳಾದ ಕೆಲಗೇರಿಯ ಓಪನ್ ಜಿಮ್ – ಒಂದೂವರೆ ವರ್ಷವಾಗಿಲ್ಲ ಕೋಟ್ಯಾಂ ತರ ರೂಪಾಯಿಯ ಕೆರೆಯ ಜಿಮ್ ಹೇಗಾಗಿದೆ ನೋಡ್ರಿ ಪಾಲಿಕೆಯವರಿಗೆ ಇದನ್ನು ನೋಡಲು ಟೈಮ್ ಇಲ್ಲ ಹೌದು

ಜನರು ತುಂಬಿದ ತೆರಿಗೆ ಹಣವನ್ನು ಸರ್ಕಾರಗಳು ಜನಪ್ರತಿನಿಧಿಗಳು ಅಧಿಕಾರಿಗಳು ಹೇಗೆ ಬಳಸು ತ್ತಾರೆ ಎಂಬೊದಕ್ಕೆ ಧಾರವಾಡದ ಕೆಲಗೇರಿ ಕೆರೆಯ ದಂಡೆಯ ಮೇಲೆ ನಿರ್ಮಾಣಗೊಂಡಿ ರುವ ಓಪನ್ ಜಿಮ್ ಸಾಕ್ಷಿ.ಹೌದು ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಲಗೇರಿ ಕೆರೆಯ ದಂಡೆಯ ಮೇಲೆ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯವರು ಈ ಒಂದು ಓಪನ್ ಜಿಮ್ ನನ್ನು ನಿರ್ಮಾಣ ಮಾಡಿದ್ರು

ಬೆಳಿಗ್ಗೆ ಸಂಜೆ ಸಮಯದಲ್ಲಿ ವಾಯವಿಹಾರಕ್ಕೆ ಬರುವ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಈ ಒಂದು ಓಪನ್ ಜಿಮ್ ಗಳನ್ನು ನಿರ್ಮಾಣ ಮಾಡಲಾಗಿದೆ.ಸಾಮಾನ್ಯವಾಗಿ ಯಾವುದೇ ಒಂದು ಯೋಜನೆಯನ್ನು ಆರಂಭ ಮಾಡುವ ಮುಂಚೆ ಹಿಂದೆ ಮುಂದೆ ಇದರ ಬಗ್ಗೆ ಯೋಚನೆ ಮಾಡಿ ನಂತರ ಅನುಷ್ಠಾನಗೊಳಿ ಸಬೇಕು ಹೀಗಿರುವಾಗ ಯಾವುದನ್ನು ನೋಡದೆ ವಿಚಾರಿಸದೇ ಆರಂಭ ಮಾಡಿದ ಪರಿಣಾಮ ವಾಗಿ ಇಂದು ಬಹು ನೀರಿಕ್ಷಿತ ಈ ಒಂದು ಯೋಜನೆ ಹಳ್ಳ ಹಿಡಿದಿದೆ

ಆರಂಭ ಮಾಡಿ ಒಂದೂವರೆ ವರ್ಷದೊಳಗಾಗಿ ಓಪನ್ ಜಿಮ್ ಸಂಪೂರ್ಣವಾಗಿ ಹಾಳಾಗಿದೆ ಕೋಟಿ ಕೋಟಿ ರೂಪಾಯಿ ಹಾಕಿ ಯೋಜನೆ ಆರಂಭ ಮಾಡೊದು ಅಷ್ಟೇ ಗೊತ್ತು ನಮ್ಮ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮುಂದೆ ಅದರ ಬಗ್ಗೆ ಒಂದಿಷ್ಟು ವಿಚಾರ ಕೂಡಾ ಮಾಡೊ ದಿಲ್ಲ ಹೀಗಿರುವಾಗ ಯೋಜನೆಗಳು ಹೇಗೆ ಉಳಿ ಯಬೇಕು ಹೀಗಾಗಿ ಸಧ್ಯ ಕೆಲಗೇರಿ ಕೆರೆಯ ಓಪನ್ ಜಿಮ್ ಹೇಗಾಗಿದೆ ನೋಡ್ರಿ ಎಂಬ ಪರಸ್ಥಿತಿ ಸ್ಥಳದಲ್ಲಿ ಕಂಡು ಬರುತ್ತಿದೆ.

ಎಲ್ಲರಿಗೂ ಅನುಕೂಲವಾಗಲೆಂದು ವ್ಯವಸ್ಥೆ ಯೆನೋ ಮಾಡಿದ್ದಾರೆ ಆದರೆ ನಮಗೆ ಚೆಂದಾಗಿ ಉಳಿಸಿಕೊಳ್ಳುವ ಯೋಗ್ಯತೆಯಿಲ್ಲ ನಾವೆಲ್ಲಾ ಇಂಥವಕ್ಕೆ ಯೋಗ್ಯರಾ ಎಂಬ ಪ್ರಶ್ನೆ ಸಧ್ಯ ಇಲ್ಲಿನ ಪರಸ್ಥಿತಿಯನ್ನು ನೋಡಿ ಕಾಡ್ತಿದೆ ನಾವೆಂದು ಸುಧಾರಿಸೋದು ಶುರುವಾಗಿ ದೀಡ ವರ್ಷಾಗಿಲ್ಲ ಆಗಲೇ ಕೆರೆಯ ನಿರ್ಮಾತೃ ಸರ್ ಎಂ.ವಿಶ್ವೇಶ್ವರ ಯ್ಯ ಅವರ ಕಂಚಿನ ಮೂರ್ತಿಯ ಕೈಯಲ್ಲಿನ ಕೋಲು ನಾಪತ್ತೆಯಾಗಿದೆ.

ಈ ಹಿಂದೆ ಒಮ್ಮೆ ಕೆಳಕ್ಕೆ ಬಿದ್ದ ಊರುಗೋಲನ್ನು ಸೆಕ್ಯೂರಿಟಿ ಯವರು ಜೋಪಾನವಾಗಿ ತೆಗೆದಿರಿಸಿ ದ್ದಾರೆ ಇನ್ನೂ ಮಕ್ಕಳು ಹಾಗೂ ದೊಡ್ಡವರ ಜಿಮ್ ಆಟಿಗೆಗಳು ಒಂದೊಂದೇ ಅಂಗಗಳನ್ನು ಕಳಚಿ ಕೊಂಡಿದ್ದು ಸೆಕ್ಯೂರಿಟಿ ಕ್ಯಾಬಿನ್ ನ ಗ್ಲಾಸ್ ಸಹ ಒಡೆದಿದ್ದಾರೆ‌ ಇಬ್ಬರು ಆಡುವ ತಿರುಗುಣಿ ಮೇಲೆ ಐದಾರು ಮಕ್ಕಳನ್ನು ನಿಲ್ಲಿಸಿ ಫುಲ್ ಸ್ಪೀಡಾಗಿ ಮುರಿದು ಹೋಗುವ ಹಾಗೆ ತಿರುಗಿಸುತ್ತಿರುವುದು ಕಂಡು ಬರುತ್ತಿದೆ.

ಇದನ್ನು ನೋಡಿ ಯಾರಾದರೂ ಹೇಳೋಕೆ ಹೋದರೆ ನೀವ್ಯಾರು ಎಂಬ ಪ್ರಶ್ನೆ ಕಂಡು ಬರುತ್ತಿದೆ ಇದರ ನಡುವೆ ಕಲಾವಿದ ಮಂಜುನಾಥ ಹಿರೇಮಠ ಮತ್ತು ಗೆಳೆಯರು ಸೇರಿ ಇಲ್ಲಿ ಸ್ವಂತ ಖರ್ಚಿನಲ್ಲಿ ಹಾಕಿದಂತಹ ಕೆಲವು‌ ಸೂಚನಾ ಫಲಕಗಳನ್ನೂ ಕೂಡಾ ಕಿತ್ತೆಸೆದಿದ್ದಾರೆ ಈ ಜಿಮ್ ಇನ್ನೆಷ್ಟು ದಿನ ಉಪಯೋಗವಾಗುತ್ತೋ‌ ಗೊತ್ತಿಲ್ಲ ನಿರ್ವಹಣೆ ಹಾಗೂ ಭದ್ರತೆ ಇನ್ನೂ ಹೆಚ್ಚಾಗಬೇ ಕಿದೆ

ಸಂಭಂದಿಸಿದವರು ಗಮನಹರಿಸಿ ಎಂಬ ಮಾತು ಗಳನ್ನು ಸಾರ್ವಜನಿಕರು ಹೇಳುತ್ತಿದ್ದಾರೆ. ಇದನ್ನೇ ಲ್ಲವನ್ನು ನೋಡಿ ಈ ಕುರಿತಂತೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕಾದ ಮಹಾನಗರ ಪಾಲಿಕೆ ಮಾತ್ರ ಇತ್ತ ಕಣ್ತೇರೆದು ನೋಡುತ್ತಿಲ್ಲ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.