ಬೆಂಗಳೂರು –
ಕರೋನಾ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಗರ್ಭಿಣಿ ಮಹಿಳಾ ಶಿಕ್ಷಕಿಯರಿಗೆ ಹಾಗೇ ವಿಕಲಚೇತನ ಶಿಕ್ಷಕರಿಗೆ ರಾಜ್ಯ ಸರ್ಕಾರ ಮನೆಯಿಂ ದಲೇ ಕೆಲಸವನ್ನು ಮಾಡಲು ಆದೇಶವನ್ನು ನೀಡಿದೆ.
ಸಧ್ಯ ಇನ್ನೂ ಕೂಡಾ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಕಡಿಮೆಯಾಗಿಲ್ಲ ಹೀಗಾಗಿ ಇದನ್ನು ಅರಿತ ರಾಜ್ಯ ಸರ್ಕಾರ ಜುಲೈ 19 ರವರೆಗೆ ಮನೆಯಿಂದಲೇ ಕೆಲಸವನ್ನು ಮಾಡಲು ಅವಕಾಶವನ್ನು ನೀಡಿ ಆದೇಶವನ್ನು ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಈ ಒಂದು ಆದೇಶವನ್ನು ಮಾಡಿದ್ದು ಹೀಗಾಗಿ ಈ ಒಂದು ಪ್ರತಿಯನ್ನು ರಾಜ್ಯದ ಎಲ್ಲಾ ಉಪ ನಿರ್ದೇ ಶಕರು ಸಾರ್ವಜನಿಕರ ಶಿಕ್ಷಣ ಇಲಾಖೆಯವರಿಗೆ ಕಳಿಸಿದ್ದು ಇನ್ನೂ ಇವರೊಂದಿಗೆ ದೃಷ್ಟಿಹೀನ ಹಾಗೇ ದೈಹಿಕ ಅಂಗವೈಕಲ್ಯವನ್ನು ಹೊಂದಿದ ಶಿಕ್ಷಕರಿಗೂ ಅನ್ವಯವಾಗಲಿದೆ ಎಂಬ ಒಂದು ಆದೇಶವನ್ನು ಮಾಡಲಾಗಿದ್ದು ಜುಲೈ 15 ರವರೆಗೆ ಮನೆಯಿಂದಲೇ ಕೆಲಸವನ್ನು ಮಾಡಲು ಅವಕಾಶವನ್ನು ನೀಡಿದೆ.