ಹೋಮ್ ವರ್ಕ್ ಮಾಡಲಿಲ್ಲ ಅಂತಾ ವಿದ್ಯಾರ್ಥಿ ಗೆ ಹೀಗೆ ಮಾಡೊದಾ – ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಪೋಷಕರು…..

Suddi Sante Desk

ಕೊಪ್ಪಳ –

ವಿದ್ಯಾರ್ಥಿಯೊಬ್ಬ ಹೋಂ ವರ್ಕ್‌ ಮಾಡಿಲ್ಲ ಅಂತ ಕೋಪಗೊಂಡ ಶಿಕ್ಷಕ ಆತನನ್ನು ಮನಬಂದಂತೆ ಥಳಿಸಿ ಕಿವಿಯಲ್ಲಿ ರಕ್ತ ಬರೋವಂತೆ ಹೊಡೆದು ಚಿತ್ರಹಿಂಸೆ ನೀಡಿರಿವ ಘಟನೆ ಕೊಪ್ಪಳ ಜಿಲ್ಲೆಯ ಧನ್ವಂತರಿ ಕಾಲೋನಿ ಯಲ್ಲಿ ನಡೆದಿದೆ.ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕ ನನ್ನು ಲೋಹಿತ್‌ ಎಂದು ಗುರುತಿಸಲಾಗಿದೆ.ಈತ ಇಲ್ಲಿನ ನವೋದಯ ಸೈನಿಕ್‌ ಶಾಲೆಯಲ್ಲಿ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದ.ಈ ಸಂದರ್ಭದಲ್ಲಿ ಹೋಂ ವರ್ಕ್‌ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಆದರೆ ವಿದ್ಯಾರ್ಥಿ 10 ವರ್ಷದ ಪ್ರಥಮ್‌ ಎಂಬ ಬಾಲಕ ಹೋಂ ವರ್ಕ್‌ ಮಾಡಿರಲಿಲ್ಲ. ಇದ ರಿಂದ ಕೋಪಗೊಂಡ ಲೋಹಿತ್‌ ಮನಬಂದಂತೆ ಹೊಡೆದಿ ದ್ದಾನೆ ಪರಿಣಾಮ ಕಿವಿಯಲ್ಲಿ ರಕ್ತಬಂದಿದೆ.

ಸದ್ಯ ವಿದ್ಯಾರ್ಥಿ ಪ್ರಥಮ್‌ಗೆ ಚಿಕಿತ್ಸೆ ನೀಡಲಾಗಿದೆ.ಶಿಕ್ಷಕನ ಕ್ರೂರ ಕೃತ್ಯದಿಂದ ಬಾಲಕ ಪ್ರಥಮ್‌ ನೋವು ಅನುಭವಿ ಸುತ್ತಿದ್ದಾನೆ.ಈ ಘಟನೆ ಮಾತ್ರವಲ್ಲದೆ ತರಗತಿಗೆ ಬರುವ ಹಲವಾರು ವಿದ್ಯಾರ್ಥಿಗಳ ಮೇಲೆ ಲೋಹಿತ್‌ ಇದೇ ರೀತಿ ಹಲ್ಲೆ ನಡೆಸುತ್ತಾನಂತೆ.ಸದ್ಯ ಶಿಕ್ಷಕ ಲೋಹಿತ್‌ನ ಕ್ರೂರ ಕೃತ್ಯದ ವಿರುದ್ಧ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿ ಸಿದ್ದು, ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.