ಮೈಸೂರು –
ಇತಿಹಾಸ ಸಾರುವ ಐತಿಹಾಸಿಕ ಮಹಾರಾಣಿ ಮಾದರಿ ಎನ್‌ಟಿಎಂ ಶಾಲೆಯನ್ನು ಉಳಿಸಿ ವಿವೇಕಾ ನಂದರ ಸ್ಮಾರಕ ನಿರ್ಮಿಸಬೇಕೆಂದು ಆಗ್ರಹಿಸಿ ಎನ್‌ಟಿಎಂಎಸ್ ಶಾಲೆಯ ಉಳಿಸಿ ಹೋರಾಟ ಸಮಿತಿಯ ಸದಸ್ಯರು ಶಾಲಾ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು.
ಮೈಸೂರಿನ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ರುವ ಶಾಲೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಶಾಲೆಯ ವಿದ್ಯಾರ್ಥಿಗಳು ಪೋಷಕರು ಹಾಗೂ ಸಮಿತಿ ಸದಸ್ಯರು ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.ಮಳೆಯ ನಡುವೆಯು ಅರ್ಧ ತಾಸು ಮೌನ ಪ್ರತಿಭಟನೆ ನಡೆಸಿದ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಯಿತು.
ಇದರಿಂದ ಎನ್‌ಟಿಎಂ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ಹಾಗೆಯೇ ಉಳಿಸಿ ಕೊಂಡಂತಾಗು ತ್ತದೆ. ಮುಖ್ಯಮಂತ್ರಿಯವರ ನಿರ್ದೇಶನ ಹಿನ್ನೆಲೆ ಯಲ್ಲಿ ಉಲ್ಲೇಖ ಸರ್ಕಾರದ ಆದೇಶವನ್ನು ಮರು ಪರಿಶೀಲಿಸಿಬಹುದಾಗಿದೆ ಎಂದು ಒತ್ತಾಯಿಸಿದರು.
ಶಾಲಾ ಜಾಗವನ್ನು ಹೊರತುಪಡಿಸಿ ಪೂರ್ವ ಪಶ್ಚಿಮ ೨೦೬ ಅಡಿಗಳು ಹಾಗೂ ಉತ್ತರ ದಕ್ಷಿಣ 28 ಅಡಿ ಗಳು 206 * 28=16068 ಚದರ ಅಡಿಗಳಷ್ಟು ಜಾಗವು ಲಭ್ಯವಿದ್ದು, ಸದರಿ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬಹುದಾಗಿದೆ ಎಂದು ಒತ್ತಾಯ ಮಾಡಿದರು