ಹುಬ್ಬಳ್ಳಿ –
ಡ್ಯಾನ್ಸ್ ಮಾಡುತ್ತಾ ಕನ್ನಡ ಹಬ್ಬ ಆಚರಣೆ ಮಾಡಿದ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ – ಡೊಳ್ಳು ನಗರಿ ಬಾರಿಸುತ್ತಾ ಸಂಗೀತ ನಿನಾದಕ್ಕೆ ಹೆಜ್ಜೆ ಹಾಕಿ ಕುಪ್ಪಳಿಸಿದ ವಿಪಕ್ಷ ನಾಯಕಿ.
ಕನ್ನಡ ರಾಜ್ಯೋತ್ಸವದ ಹಬ್ಬ ಸಡಗರ ಸಂಭ್ರಮ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಕಂಡು ಬಂದಿತು.ನಗರದ ತುಂಬೆಲ್ಲಾ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಇನ್ನೂ ಮಹಾನಗರ ಪಾಲಿಕೆ ಯ ವತಿಯಿಂದಲೂ ಈ ಒಂದು ಕನ್ನಡ ಹಬ್ಬ ವನ್ನು ಆಚರಿಸಲಾಯಿತು.ನಗರದ ಸಿದ್ದಾರೂಢ ಮಠದಲ್ಲಿ ಅದ್ದೂರಿಯಾಗಿ ಪಾಲಿಕೆಯ ವತಿ ಯಿಂದ ಕನ್ನಡ ನುಡಿ ಹಬ್ಬವಾದ ಕನ್ನಡ ರಾಜ್ಯೋ ತ್ಸವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಇನ್ನೂ ರಾಜ್ಯೋತ್ಸವದ ಹಿನ್ನಲೆಯಲ್ಲಿ ಮಠದ ಆವರಣದಲ್ಲಿ ಕನ್ನಡ ಮಾತೆಯ ಭಾವಚಿತ್ರದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.ಹೌದು ಇದರೊಂದಿಗೆ ಹುಬ್ಬಳ್ಳಿಯಲ್ಲೂ ಕನ್ನಡ ರಾಜ್ಯೋ ತ್ಸವದ ಸಂಭ್ರಮ ಅದ್ದೂರಿಯಾಗಿ ಕಂಡು ಬಂದಿತು ಇನ್ನೂ ಈ ಒಂದು ಮೆರವಣಿಗೆಯಲ್ಲಿ ವಿಶೇಷವಾಗಿ ಕಂಡು ಬಂದಿದ್ದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ ಅವರ ನೃತ್ಯ ಸಿದ್ಧಾರೂಢ ಮಠದಿಂದ ಕನ್ನಡಾಂಬೆ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಈ ಒಂದು ವಿಶೇಷವಾದ ಚಿತ್ರಣ ಕಂಡು ಬಂದಿತು.
ಮೆರವಣಿಗೆಯ ಉದ್ದಕೂ ವಿರೋಧ ಪಕ್ಷದ ನಾಯಕಿಯವರು ಸಖತ್ ಸ್ಟೇಫ್ಸ್ ಹಾಕಿದ್ದು ಕಂಡು ಬಂದಿತು.ಕನ್ನಡ ನುಡಿ ಹಬ್ಬದಲ್ಲಿ ಪಾಲ್ಲೊಂಡಿದ್ದ ಪಾಲಿಕೆಯ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲ ಅವರು ಕೇವಲ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆರಳದೆ ಮೆರವಣಿಗೆಯಲ್ಲೂ ಕೂಡಾ ಉತ್ಸಾಹದಿಂದ ಪಾಲ್ಗೊಂಡಿದ್ದು ಕಂಡು ಬಂದಿತು.ಹೆಗಲಿಗೆ ಡೊಳ್ಳು,ನಗಾರಿಯನ್ನು ಹಾಕಿಕೊಂಡು ಕೆಲ ಕಾಲ ಬಾರಿಸುತ್ತಾ ನಂತರ ಕಲಾವಿದರೊಂದಿಗೆ ಸಂಗೀತ ನಿನಾಧದ ಆ ಶಬ್ದಕ್ಕೆ ಕುಣಿದು ಕುಪ್ಪಳಿಸಿದರು.
ಇದರೊಂದಿಗೆ ಕನ್ನಡ ತಾಯಿಯ ಕನ್ನಡ ಹಬ್ಬವನ್ನು ಅದ್ದರಿಯಾಗಿ ಆಚರಣೆ ಮಾಡಿದ ಸುವರ್ಣ ಕಲ್ಲಕುಂಟ್ಲ ಅವರು ಸಂಭ್ರಮಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..