ಹೊಸಪೇಟೆ –
ಹಾಡು ಹಗಲೇ ನ್ಯಾಯಾಲಯದ ಆವರಣದಲ್ಲೇ ನ್ಯಾಯವಾದಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹೊಸಪೇಟೆ ಯಲ್ಲಿ ನಡೆದಿದೆ.

ಆಸ್ತಿ ವೈಷಮ್ಯದ ಶಂಕೆ ಹಿನ್ನಲೆಯಲ್ಲಿ ಈ ಒಂದು ಕೊಲೆ ನ್ಯಾಯಾಲಯದ ಆವರಣದಲ್ಲೇ ನಡೆದಿದೆ. ನ್ಯಾಯವಾದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ತಾರಿಹಳ್ಳಿ ವೆಂಕಟೇಶ್ (43) ಕೊಲೆಯಾದ ನ್ಯಾಯವಾದಿಯಾಗಿದ್ದಾರೆ.

ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಈ ಒಂದು ಘಟನೆ ನಡೆದಿದೆ.ಮಚ್ಚಿನಿಂದ ಕುತ್ತಿಗೆ ತಲೆಗೆ,ಹಾಗೂ ಮುಖಕ್ಕೆ ಕೊಚ್ಚಿ ಪರಾರಿಯಾಗು ವಾಗ ಆಗಂತುಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ

ಹಾಡು ಹಗಲೇ ಈ ಒಂದು ಕೊಲೆಯಿಂದ ಬೆಚ್ಚಿ ಬಿದ್ದಿದ್ದಾರೆ ಹೊಸಪೇಟೆ ನಾಗರೀಕರು. ಕೊಲೆಯಾಗಿ ರುವ ವೆಂಕಟೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಕೂಡ ಆಗಿದ್ದಾರಂತೆ.

ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಪ್ರಕರಣ ಕುರಿತು ಒರ್ವ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ ಪೊಲೀಸರು.