ಕೋಲಾರ –
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಊರಿನ ಜನ ತನಗೆ ವೋಟ್ ಹಾಕಿಲ್ಲವೆಂದು ರಸ್ತೆ ಬಂದ್ ಮಾಡಿ ದರ್ಪ ತೋರಿದ್ದಾರೆ.ಜೆಸಿಬಿ ಮೂಲಕ ರಸ್ತೆಯಲ್ಲಿ ಗುಂಡಿ ತೆಗೆದು ಗ್ರಾಮಸ್ಥರಿಗೆ ತೊಂದರೆ ಕೊಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಚುನಾವಣೆಯಲ್ಲಿ ಸೋತ ಗಿರಿಗೌಡ ಎಂಬುವರಿಂದ ಇಂಥದೊಂದು ಕೃತ್ಯ ನಡೆದಿದೆ.ಅಗ್ರಹಾರ ಹೊಸಹಳ್ಳಿ ಗ್ರಾಮದ ಹುಣಿಸೆದಿನ್ನೆಗೆ ಹೋಗೊ ದಾರಿ ಬಂದ್ ಮಾಡಲಾಗಿದೆ.

ಸುಮಾರು 25 ಮನೆಗಳಿಗೆ ಹೋಗುವ ದಾರಿ ಬಂದ್ ಮಾಡಿ ರಿವೇಜ್ ತಗೆದುಕೊಂಡಿದ್ದಾರೆ ಇವರು.ನಿನ್ನೆ ಮತ ಎಣಿಕೆ ಬಳಿಕ ರಾತ್ರಿ ಸೋತ ಅಭ್ಯರ್ಥಿ ಯಿಂದ ಕೃತ್ಯ ನಡೆದಿದೆ.

ಇನ್ನೂ ತಮಗೆ ನ್ಯಾಯ ಕೊಡಿಸುವಂತೆ ಗ್ರಾಮಸ್ಥರ ಒತ್ತಾಯವನ್ನು ಮಾಡಿದರು.ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.