ಬೆಂಗಳೂರು –
ರಾಜ್ಯದ ಹಲವೆಡೆ ಎರಡನೇಯ ಹಂತದ ಮತದಾನ ನಡೆಯುತ್ತಿದೆ.ಮಠಾಧೀಶರು, ವಯೋವೃದ್ದರು, ಅಂಗವಿಕಲರು,ಅನಾರೋಗ್ಯ ಪೀಡಿತರು,ಕಾಲು ಕೈ ಇಲ್ಲದವರು ಹೀಗೆ ಎಲ್ಲರೂ ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ತಮ್ಮ ಹಕ್ಕುಗಳನ್ನು ಚಲಾವಣೆ ಮಾಡಿದರು.

ವಯಸ್ಸಾಗಿದೆ ಎಂದುಕೊಂಡು ವಯೋವೃದ್ದರು ಮನೆಯಲ್ಲಿ ಕುಳಿತುಕೊಳ್ಳದೇ, ನಮಗೆ ಹುಷಾರಿಲ್ಲ ಎಂದುಕೊಂಡು ಹಾಸಿಗೆ ಹಿಡಿದು ಮಲಗಿಕೊಳ್ಳದೇ
ನನಗೆ ಕಾಲು ಪೆಟ್ಟಾಗಿದೆ ಎಂದುಕೊಂಡು ಬೆಡ್ ಮೇಲೆ ವಿಶ್ರಾಂತಿ ಮಾಡದೇ ನಾವುಗಳು ಮಠಾಧೀಶರು ನಮ್ಮ ಒಂದು ಮತದಿಂದ ಏನಾಗುತ್ತದೆ ಬಿಡಿ ಎಂದುಕೊಂಡು ಸುಮ್ಮನಿರದೇ

ನನಗೆ ಕೈ ಇಲ್ಲ ಕಾಲು ಇಲ್ಲ ನಾನು ಹೇಗೆ ಮತ ಹಾಕಲಿ ಎಂದುಕೊಳ್ಳದೇ ಹೀಗೆ ಎಲ್ಲರೂ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ತಮ್ಮ ಹಕ್ಕನ್ನು ಚಲಾವಣೆ ಮಾಡಿದರು.

ಯಾರ ಸಹಾಯವಿಲ್ಲದೇ ಎರಡು ಕೈಯಿಲ್ಲದ ಯುವತಿಯೊಬ್ಬರು ಮತದಾನ ಮಾಡಿದರು. ವಿಕಲಚೇತನವಾಗಿರುವ ಲಕ್ಷ್ಮೀದೇವಿಯಿಂದ ಮತದಾನವಾಯಿತು.

ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಗ್ರಾಮದ ಬೂತ್ ನಂಬರ್ 47 ರಲ್ಲಿ ಮತದಾನ ಮಾಡಿದ ಲಕ್ಷ್ಮೀದೇವಿ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮೊಣಗು ಪ್ರತಿ ಚುನಾವಣೆಯಲ್ಲಿಯೂ ಯಾರ ಸಹಾಯವಿಲ್ಲದೇ ಮತ ಚಲಾವಣೆ ಮಡೋ ಲಕ್ಷ್ಮೀದೇವಿ ಈಬಾರಿಯೂ ಗ್ರಾಮ ಪಂಚಾಯತ ನಲ್ಲೂ ಮತ ಹಾಕಿದರು.

ಇನ್ನೂ ಇತ್ತ ಉಜ್ಜೈನಿ ಶ್ರೀಗಳಿಂದ ಮತದಾನ ಮಾಡಲಾಯಿತು. ಬಳ್ಳಾರಿ ಜಿಲ್ಲೆ ಕೋಟ್ಟೂರು ತಾಲೂಕಿನ ಉಜ್ಜೈನಿಯಲ್ಲಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶೀಕೆಂದ್ರ ಶಿವಾಚಾರ್ಯ ಮಹಾ ಭಗವತ್ಪಾದರು ಮತದಾನ ಮಾಡಿದರು.
ಹೀಗೆ ರಾಜ್ಯದ ತುಂಬೆಲ್ಲಾ ಹತ್ತು ಹಲವಾರು ವಿಶೇಷತೆಗಳ ವ್ಯಕ್ತಿತ್ವ ಹೊಂದಿರುವ ಗಣ್ಯರು ವ್ಯಕ್ತಿಗಳು ಮತದಾನ ಮಾಡಿ ಎಲ್ಲರ ಗಮನ ಸೆಳೆದರು.
ಮೂವರು ಶತಾಯಿಸಿಗಳಿಂದ ಮತದಾನ.

ಇನ್ನೊಂದೆಡೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮೂವರು ಶತಾಯುಷಿಗಳು ಮತದಾನ ಮಾಡಿದರು.
ಮಾರಮ್ಮ(102), ಮುನಿಯಮ್ಮ(101)ಗೌರಮ್ಮ(100) ಹಾಗೂ ನಿಂಗಮ್ಮ(95) ರಿಂದ ಮತದಾನ ನಡೆಯಿತು.

ವೀಲ್ ಚೇರ್ ಮೇಲೆ ಬಂದು ಮತದಾನ ಮಾಡಿದ ಶತಾಯುಷಿಗಳು.ವೃದ್ದೆಯರ ಮತದಾನದಿಂದ ಗ್ರಾಮಸ್ಥರ ಮೆಚ್ಚುಗೆ ಗಳಿಸಿದರು.ಒಟ್ಟಾರೆ ಎಲ್ಲವುಗಳ ನಡುವೆ ಈ ವಿಶೇಷ ವ್ಯಕ್ತಿತ್ವದವರು ಇಂದು ಮತದಾನ ಮಾಡಿ ಎಲ್ಲರ ಮೆಚ್ಚುಗೆ ಪಡೆದರು
