ಬೆಂಗಳೂರು –
ಇಂದಿನಿಂದ ಅಂತರ್ ವಿಭಾಗದ ಶಿಕ್ಷಕರ ವರ್ಗಾವಣೆ ನಡೆಯುತ್ತಿದ್ದು ವರ್ಗಾವಣೆ ಇದೆ ಎಂದುಕೊಂಡು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಹೋದ ಶಿಕ್ಷಕರಿಗೆ ದೊಡ್ಡ ಶಾಕ್ ಆಗಿದೆ ವರ್ಗಾವಣೆ ಇದೆ ಇಲ್ಲ ಎಂಬ ಚಿತ್ರಣ ಬೆಂಗಳೂರಿನಲ್ಲಿ ಕಂಡು ಬರುತ್ತಿದೆ.

ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಹೋಗಿದ್ದು ಶಿಕ್ಷಕರ ಭವನದಲ್ಲಿ ಪರದಾಡಿದ ಚಿತ್ರಣ ಕಂಡು ಬಂದಿತು.
ಇಂದಿನಿಂದ ಅಂತರ್ ವಿಭಾಗದ ವರ್ಗಾವಣೆ ನಡೆಯಬೇ ಕಾಗಿತ್ತು ಆದರೆ ಯಾವುದೇ ಸಿದ್ದತೆ ವರ್ಗಾವಣೆ ಪ್ರಕ್ರಿಯೆ ಮಾಡದಿರುವ ಚಿತ್ರಣ ಕಂಡು ಬಂದಿತು ಹೀಗಾಗಿ ಸ್ಥಳ ದಲ್ಲಿ ಶಿಕ್ಷಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು ಇನ್ನೂ ಈ ಕೂಡಲೇ ವರ್ಗಾವಣೆ ಸಮಸ್ಯೆ ಯನ್ನು ಪರಿಹಾರ ಮಾಡಿ ಆರಂಭ ಮಾಡುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಒತ್ತಾಯವನ್ನು ಮಾಡಿದ್ದಾರೆ.