ರಬಕವಿ-ಬನಹಟ್ಟಿ –
ರಬಕವಿ ಬನಹಟ್ಟಿ ಯಲ್ಲಿ ಶಿಕ್ಷಕರ ಮೇಲೆ ಹಲ್ಲೆ ಮಾಡಿದ ಪ್ರಕರಣ ಕುರಿತು ಇಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಹೌದು ಹಲ್ಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ಒಳಪಡಿಸಲಾಗಿದೆ. ಉಳಿದ ಮೂರು ಜನರನ್ನು ಗುರುತಿಸಲಾಗಿದ್ದು ಅವರನ್ನು ಕೂಡಾ ಅಗತ್ಯ ಕಾನೂನಿನ ಕ್ರಮಕ್ಕೆ ಒಳಪಡಿಸಲಾಗು ವುದು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಲೋಕೇಶ ಜಗಲಾಸರ ಹೇಳಿದ್ದಾರೆ

ಬನಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲ್ಲೂ ತೂರಾಟಕ್ಕೆ ಸಂಬಂಧಿಸಿದ ಹಾಗೇ ಈಗಾಗಲೇ ನಾವು 13 ಜನರನ್ನು ಬಂಧಿಸಿದ್ದು ಇನ್ನೂ ಉಳಿದವರನ್ನು ಗುರುತಿಸಿ ಕಾನೂನಿನ ಕ್ರಮ ತೆಗದುಕೊಳ್ಳೂವ ಪ್ರಕ್ರಿಯೆ ಮುಂದುವರೆದಿದೆ ಎಂದರು.


ಬನಹಟ್ಟಿ ಶಾಂತಿ ಪ್ರೀಯ ನಗರ ಹೊರಗಿನವರು ಬಂದು ಶಾಂತಿಯನ್ನು ಕದಡುವ ಕೆಲಸವಾಗಬಾರದು. ವಿದ್ಯಾರ್ಥಿ ಗಳು ಕಾನೂನು ಕೈತೆಗೆದುಕೊಳ್ಳುವ ಕೆಲಸ ಮಾಡಬಾರದು ಎಂದರು.