ಕುಖ್ಯಾತ ಮನೆಗಳ್ಳನನ್ನು ಹಿಡಿದ ಪೊಲೀಸರು – ಸಾರ್ವಜನಿಕರಿಗೆ ಪೊಲೀಸರಿಗೆ ದೊಡ್ಡ ತಲೆನೋವಾ ಗಿದ್ದವ ಅಂದರ್…..

Suddi Sante Desk

ಬಳ್ಳಾರಿ –

ಹೊಸಪೇಟೆ ಸುತ್ತ ಮುತ್ತಲೂ ಸಾರ್ವಜನಿಕರಿಗೆ ಮತ್ತು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಕುಖ್ಯಾತ ಮನೆ ಗಳ್ಳನನ್ನು ಹೊಸಪೇಟೆಯ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.ಹೌದು ಕಳೆದ ಹಲವು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧನ ಮಾಡಲಾಗಿದೆ.

ಹೊಸಪೇಟೆ ಗ್ರಾಮೀಣ ಪೊಲೀಸರ ಕಾರ್ಯಾಚ ರಣೆ ಮಾಡಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಮನೆಗಳ್ಳ ನನ್ನು ಬಂಧನ ಮಾಡಿದ್ದಾರೆ.ಬಂಧಿತನಿಂದ ಆರು ಲಕ್ಷ ಮೌಲ್ಯದ ನಗನಾಣ್ಯವನ್ನು ವಶಕ್ಕೆ ತಗೆದುಕೊ ಳ್ಳಲಾಗಿದೆ.ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀನಿವಾಸ್ ಮೇಟಿ ನೇತೃತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆ ಯಲ್ಲಿ ಹೊಸಪೇಟೆ ತಾಲೂಕಿನ ಸಿರಸಿನಕಲ್ಲು, ಕೆರೆತಾಂಡ, ಕಮಲಾಪುರ, ಕಲ್ಲಹಳ್ಳಿಯಲ್ಲಿ ಮನೆಗಳ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಮನೆಗಳ್ಳ ನನ್ನು ಬಂಧನ ಮಾಡಿದ್ದು ಇದರಿಂದ ಸಾರ್ವಜನಿ ಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.