ಸೆಕ್ಸ್ ಸಿಡಿ ಯಲ್ಲಿನ ಯುವತಿಯ ವಿಳಾಸ ಪತ್ತೆ ಮಾಡಿದ ಪೊಲೀಸರು

Suddi Sante Desk

ಬೆಂಗಳೂರು –

ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಯಲ್ಲಿನ ಯುವತಿಯ ಹೆಸರನ್ನು ಈಗಾಗಲೇ ಪತ್ತೆ ಮಾಡಿರುವ ಪೊಲೀಸರು ಇದರ ಬೆನ್ನಲ್ಲೇ ಅವರ ವಿಳಾಸವನ್ನು ಕೊನೆಗೂ ಪೊಲೀಸರು ಪತ್ತೆ ಮಾಡಿದ್ದಾರೆ. ಹೌದು ಸಿಡಿ ಬಿಡುಗಡೆ ನಂತರ ದೊಡ್ಡ ತಲೆನೋವಾಗಿದ್ದ ಯುವತಿಯ ವಿಳಾಸವನ್ನು ಕೊನೆಗೂ ಕಬ್ಬನ್ ಪಾರ್ಕ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆ ಸಿಡಿಯಲ್ಲಿದ್ದ ನಿಗೂಢ ಯುವತಿ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆ ಯುವತಿಯನ್ನು ಪತ್ತೆಹಚ್ಚಲು ನಾಲ್ಕೈದು ದಿನಗಳಿಂದ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಆಕೆಯ ವಿಳಾಸವನ್ನು ಪತ್ತೆಹಚ್ಚಿದ್ದಾರೆ.ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್ ವಿಡಿಯೋದಲ್ಲಿದ್ದ ಯುವತಿ ಇವಳೇ ಎಂದು ಕಳೆದ ಮೂರು ನಾಲ್ಕು ದಿನಗಳಿಂದ ಸುಂದರವಾದ ಯುವತಿಯೊಬ್ಬಳ ಫೋಟೋ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿತ್ತು ಈಗ ಇದರ ಬೆನ್ನಲ್ಲೇ ಯುವತಿಯ ವಿಳಾಸ ಪತ್ತೆಯಾಗಿದೆ

ಆ ಸಿಡಿ ಯಲ್ಲಿನ ಆ ಯುವತಿಯೇ ಇವರೇ ನಾ ವಿಡಿಯೋದಲ್ಲಿದ್ದವರು ಇವರೇನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪೊಲೀಸರ ತಂಡ ಆಕೆಯ ವಿಳಾಸವನ್ನು ಪತ್ತೆಹಚ್ಚಿದೆ. ವಿಡಿಯೋ ದಲ್ಲಿದ್ದ ಯುವತಿಯ ಮನೆ ವಿಳಾಸ ಪತ್ತೆ ಮಾಡಿದ ಪೊಲೀಸರು ಆಕೆ ಉತ್ತರ ಕರ್ನಾಟಕದವಳು ಎಂದು ಪತ್ತೆಹಚ್ಚಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಜೊತೆಗಿನ ಆಡಿಯೋ ಸಂಭಾಷಣೆಯಲ್ಲೂ ಆ ಯುವತಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಿದ್ದಳು. ಆದರೆ, ಆಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾಳೆ ಎಂದು ದೂರುದಾರ ಹೇಳಿದ್ದರು. ಹೀಗಾಗಿ, ಬೆಂಗಳೂರಿನ ಪಿಜಿಗಳಲ್ಲಿ ಆಕೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ಉತ್ತರ ಕರ್ನಾಟಕದಲ್ಲಿ ಆಕೆಯ ಮನೆ ವಿಳಾಸವನ್ನು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಯುವತಿ ಜಾರಕಿಹೊಳಿ ಅವರೊಂದಿಗೆ ಆಡಿಯೋದಲ್ಲಿ ಮಾತನಾಡಿರುವ ಹಾಗೆ ಯುವತಿ ಬೆಂಗಳೂರಿನ ಪಿಜಿಯಲ್ಲಿ ಇರಲಿಲ್ಲ. ಆರ್ಟಿ ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಯುವತಿ ಸಿಡಿ ಬಿಡುಗಡೆ ಆಗುವ ದಿನದಿಂದ ಕಾಣೆಯಾಗಿದ್ದಳು. ಇದುವರೆಗೂ ಯುವತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳುತ್ತಿರುವ ಪೊಲೀಸರು ಆಕೆಯ ಖಾಯಂ ಮನೆಯ ವಿಳಾಸ ಪಡೆದು ಹೋಗಿ ವಿಚಾರಣೆ ಮಾಡಿದ್ದಾರೆ. ಅತ್ತ ಸ್ವಂತ ಊರಿನಲ್ಲಿಯೂ ಇಲ್ಲ, ಇತ್ತ ಬೆಂಗಳೂರಿನಲ್ಲಿ ಇಲ್ಲ ಎಂದು ಯುವತಿ ಬಗ್ಗೆ ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಫೆ. 28ರಂದು ಯುವತಿಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅಂದಿನಿಂದ ಇದುವರೆಗೂ ಯುವತಿಯ ಮೊಬೈಲ್ ನಂಬರ್ ಸಹ ಆನ್ ಆಗಿಲ್ಲ. ಆಕೆಯ ಮೊಬೈಲ್ ಸಿಡಿಆರ್ ಅನ್ನು ಆಧರಿಸಿ ತನಿಖೆಗೆ ಇಳಿದಿರುವ ಪೊಲೀಸರು ಆಕೆಯ ಸ್ನೇಹಿತರನ್ನು ಗೌಪ್ಯವಾಗಿ ವಿಚಾರಣೆ ನಡೆಸಿದ್ದಾರಂತೆ ಯುವತಿಯ ಪತ್ತೆಗಾಗಿ ತೀವ್ರ ಹುಡುಕಾಟ ಮಾಡುತ್ತಿರುವ ಪೊಲೀಸರು ಯಾವುದೇ ಕ್ಷಣದಲ್ಲಾದರೂ ಯುವತಿಯನ್ನು ಪತ್ತೆ ಮಾಡುವ ಸಾಧ್ಯತೆಯಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.