ಮೈಸೂರು –
ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿರಾಯ ಕೊಲೆ ಮಾಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ನಡೆದಿದೆ.ನಳಿನಿ(32) ಮೃತ ದುರ್ದೈವಿಯಾಗಿದ್ದಾರೆ. ರಾಜೇಶ್ (40) ಕೊಲೆ ಆರೋಪಿಯಾಗಿದ್ದಾರೆ.ಸದ್ಯ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇಬ್ಬರು ಮಕ್ಕಳ ತಾಯಿ ನಳಿನಿ ಗೆ ಪರಪುರುಷನ ಜೊತೆ ಅಕ್ರಮ ಸಂಬಂಧ ಇತ್ತು ಈ ವಿಚಾರದಲ್ಲಿ ದಂಪತಿ ನಡುವೆ ಹಲವು ಬಾರಿ ಗಲಾಟೆ ಆಗುತ್ತಿತ್ತು.ಇದರಿಂದ ರಮಾಬಾಯಿ ನಗರದಿಂದ ಜಯನಗರಕ್ಕೆ ಪತಿ ರಾಜೇಶ್ ಮನೆ ಶಿಫ್ಟ್ ಮಾಡಿದ್ದ ರು. ಹೀಗಿದ್ದರೂ ಕೂಡಾ ನಳಿಸಿ ಅಕ್ರಮ ಸಂಬಂಧ ವನ್ನು ಮುಂದುವರಿಸಿದ್ದಳಂತೆ

ಇದರಿಂದ ರೋಸಿ ಹೋದ ರಾಜೇಶ್ ಕುಡಿದ ಮತ್ತಿ ನಲ್ಲಿ ನಳಿನಿಯನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ದ್ದಾನೆ.ಸದ್ಯ ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅಶೋಕಪುರಂ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ