ಬಾಗಲಕೋಟೆ –
ಶಿಕ್ಷಕರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡಿದ್ದ 2.85 ಲಕ್ಷ ಮೊತ್ತದ ಹಣ ಹಾಗೂ ವಿವಿಧ ದಾಖಲೆಗಳು ಒಳಗೊಂಡ ಬ್ಯಾಗ್ ಅನ್ನು 24 ಗಂಟೆಯಲ್ಲಿ ಹುಡುಕಿಕೊಡುವಲ್ಲಿ ಬಾಗಲಕೋಟೆಯ ನವನಗರ ಪೊಲೀಸರು ಯಶಸ್ವಿಯಾಗಿ ದ್ದಾರೆ.ತಾಲೂಕಿನ ಹೊಸ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಚ್.ಕುಲಕರ್ಣಿ ಅವರು ಕೊರೊನಾ ವೇಳೆ ಕಾರ್ಯ ನಿರ್ವಹಿಸಿದ ಶಿಕ್ಷಕರ ಅರ್ಜಿ ಹಾಗೂ ಶಿಕ್ಷಕರ ವೈದ್ಯಕೀಯ ಬಿಲ್‌ಗಳ ದಾಖಲೆಗಳನ್ನು ಬಿಇಒ ಕಚೇರಿಗೆ ನೀಡಲು ಹೊರಟಿದ್ದರು.ಈ ವೇಳೆ ದಾಖಲೆಗಳ ಜತೆಗೆ 2,85,600 ರೂ. ನಗದು ಹಣ ಕೂಡ ಇತ್ತು ಆಕಸ್ಮಿಕವಾಗಿ ಬ್ಯಾಗ್ ಕಳೆದುಕೊಂಡಿದ್ದರು.

ಕೂಡಲೇ ನವನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು.ತಕ್ಷಣ ಕಾರ್ಯ ಪ್ರವೃತ್ತರಾದ ಠಾಣಾ ಧಿಕಾರಿ ಜಿ.ಎಚ್. ಕುಪ್ಪಿ, ಸಿಬ್ಬಂದಿಗಳಾದ ಎಂ.ಎಂ. ಬೀಳಗಿ ವಿ.ವಿ. ಸಾಳಗುಂದಿ, ಜಮೀನ ದಳವಾಯಿ.ಎಚ್.ಎಂ. ಹುಕ್ಕೇರಿ ಅವರ ಸಮ್ಮುಖದಲ್ಲಿ ಬ್ಯಾಗ್ ಪತ್ತೆಹಚ್ಚಿದ್ದಾರೆ. ಬಳಿಕ ಶಿಕ್ಷಕರಾದ ಎಲ್.ಸಿ ಯಂಕಂಚಿ,ಎನ್.ಬಿ. ಡೊಂಬರ ಎಸ್.ಎಸ್. ಅಂಗಡಿ ಅವರ ಸಮ್ಮುಖದಲ್ಲಿ ಶಿಕ್ಷಕ ವಿ.ಎಚ್. ಕುಲಕರ್ಣಿ ಅವರಿಗೆ ಹಸ್ತಾಂತರಿಸಲಾ ಯಿತು.