ಶಿರಸಿ –
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಶಿರಸಿ ಯಲ್ಲಿ ನಡೆದಿದೆ.ಹೌದು ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋ ಪದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಯೊಂದರ ಮುಖ್ಯ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.ಸುರೇಶ ಪರಮೇಶ್ವರ ಹೆಗಡೆ (53) ಬಂಧಿತ ಮುಖ್ಯ ಶಿಕ್ಷಕ ರಾಗಿದ್ದಾರೆ

ಶಿಕ್ಷಕ ಹಲವು ದಿನಗಳಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖ ಮಾಡಿದ್ದು ವಿದ್ಯಾರ್ಥಿನಿಯ ಪಾಲಕರು ಶಿಕ್ಷಕನ ವಿರುದ್ಧ ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿ ಪಿಎಸ್‌ಐ ಈರಯ್ಯ ತನಿಖೆ ನಡೆಸು ತ್ತಿದ್ದಾರೆ.