This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

Sports News

KMF ಉತ್ಪನ್ನಗಳ ಬೆಲೆ ಏರಿಕೆ ಗ್ರಾಹಕರಿಗೆ ಇಂದಿನಿಂದ ತಟ್ಟಲಿದೆ ಬೆಲೆ ಏರಿಕೆಯ ಬಿಸಿ…..

WhatsApp Group Join Now
Telegram Group Join Now

ಬೆಂಗಳೂರು

ಕೆಎಂಎಫ್ ಉತ್ಪನ್ನಗಳಾದ ಮೊಸರು,ಮಜ್ಜಿಗೆ ಮತ್ತು ಸಿಹಿ ಲಸ್ಸಿಗಳ ಮೇಲೆ ಇಂದಿನಿಂದ ಜಿಎಸ್‌ಟಿ ಅನ್ವಯವಾ ಗಲಿದೆ.ಹೀಗಾಗಿ ಅವುಗಳ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಲಿದೆ.ಕೇಂದ್ರ ಸರಕಾರವು ಪ್ಯಾಕ್‌ ಮಾಡಲಾದ ಈ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಿರುವ ಪರಿಣಾಮ ಇದು.ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್) ದರಗಳನ್ನು ಪರಿಷ್ಕರಿಸಿ ಸುತ್ತೋಲೆ ಹೊರಡಿಸಿದೆ.

ಮೊಸರು ಮತ್ತು ಮಜ್ಜಿಗೆ ಪೊಟ್ಟಣಗಳ ಮೇಲೆ ಹಳೆ ದರ ಮುದ್ರಿತವಾಗಿದ್ದು ಈ ದಾಸ್ತಾನು ಮುಗಿಯುವವರೆಗೆ ಇಂಕ್‌ಜೆಟ್‌ ಮೂಲಕ ಪರಿಷ್ಕೃತ ದರಗಳನ್ನು ಮುದ್ರಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ.ಎಲ್ಲಾ ಗ್ರಾಹಕರು ಸಹಕರಿಸುವಂತೆ ಕೆಎಂಎಫ್ ಕೋರಿದೆ.ಕೇಂದ್ರ ಸರಕಾರವು ಮೊಸರು,ಮಜ್ಜಿಗೆ ಹಾಗೂ ಲಸ್ಸಿಗಳ ಮೇಲೆ ಶೇ.5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿ ರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜು. 18ರಿಂದ ಅನ್ವಯವಾಗುವಂತೆ ನಂದಿನಿ ಮೊಸರು (250 ಗ್ರಾಂ) 13 ರೂ., ಮೊಸರು (415 ಗ್ರಾಂ) 23 ರೂ.ಮೊಸರು (1 ಕೆ.ಜಿ.) 47 ರೂ.ಮೊಸರು (6 ಕೆ.ಜಿ.) 279 ರೂ.ಮಜ್ಜಿಗೆ (200 ಗ್ರಾಂ) 8 ರೂ.ಸಾದಾ ಮಜ್ಜಿಗೆ (500 ಗ್ರಾಂ) 20 ರೂ.ಸಿಹಿ ಲಸ್ಸಿ (200 ಗ್ರಾಂ) 13 ರೂ.ಗ ಳಂತೆ ಗರಿಷ್ಠ ಮಾರಾಟ ದರವನ್ನು ಪರಿಷ್ಕರಿಸಲಾಗಿದೆ


Google News

 

 

WhatsApp Group Join Now
Telegram Group Join Now
Suddi Sante Desk