ನವದೆಹಲಿ –
ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಯನ್ನು ಅಂದರೆ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿದ್ದು ಮತ್ತೆ 50 ರೂಪಾಯಿ ದರ ಹೆಚ್ಚಾಗಿದೆ. 14.2 ಕೆಜಿ ಸಿಲಿಂಡರ್ ದರ 50 ರೂ.ಗಿಂತಲೂ ಹೆಚ್ಚಾಗಿದ್ದು ಇದರಿಂದಾಗಿ ಪ್ರತಿ ಸಿಲಿಂಡರ್ ದರ 1 ಸಾವಿರ ರೂ. ಗಡಿ ದಾಟಿದೆ.
ಈ ಹಿಂದೆ ಮಾರ್ಚ್ 2022 ರಲ್ಲಿ ರೂಪಾಯಿ 50 ಹೆಚ್ಚಿಸ ಲಾಗಿದ್ದು 956.05 ರೂ.ದರ ಇತ್ತು.ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಕಳೆದ ವಾರ 102 ರೂ. ಹೆಚ್ಚಿಸಲಾಗಿತ್ತು. ಈಗ 19 ಕೆ.ಜಿ. ಸಿಲಿಂಡರ್ ದರ 2253 ರೂ.ಗೆ ತಲುಪಿದ್ದು ಇದರ ನಡುವೆ ಗೃಹ ಬಳಕೆಯ ಸಿಲಿಂಡರ್ ಬೆಲೆಯೂ ಹೆಚ್ಚಾಗಿದ್ದು ಇದರಿಂದಾಗಿ ಮತ್ತೆ ಗ್ರಾಹಕರಿಗೆ ಹೆಚ್ಚುವರಿ ಯಾಗಿ 50 ರೂಪಾಯಿ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.