ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ ಮಾಡಿದ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ – ರಾಜ್ಯದ ಸರ್ಕಾರಿ ನೌಕರರ ಒತ್ತಾಯಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ…..

Suddi Sante Desk
ರಾಜ್ಯದ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ ಮಾಡಿದ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ – ರಾಜ್ಯದ ಸರ್ಕಾರಿ ನೌಕರರ ಒತ್ತಾಯಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ…..

ಬೆಂಗಳೂರು

ಮಾರ್ಚ್‌ 1ರ ಸರ್ಕಾರಿ ನೌಕರರು ಮುಷ್ಕರ ಮಾಡಿದ ದಿನವನ್ನು ಅರ್ಹ ರಜೆ ಎಂದು ಪರಿಗ ಣಿಸಿ ಆದೇಶವನ್ನು ಮಾಡಿದೆ ಹೌದು ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್‌ 1ರಂದು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು.

ಆದರೆ ಕೆಲವೇ ಹೊತ್ತಿನಲ್ಲಿ ಮುಷ್ಕರ ಅಂತ್ಯಗೊ ಳಿಸಲಾಗಿತ್ತು ಮುಷ್ಕರದ ದಿನ ಕರ್ತವ್ಯಕ್ಕೆ ಗೈರು ಹಾಜರಾದುದನ್ನು ನೌಕರರ ಹಕ್ಕಿನಲ್ಲಿರುವ ಅಥವಾ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಲು ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ(ಸಿಬ್ಬಂದಿ ಮತ್ತು ಆಡಳಿತ ಸುಧಾ ರಣಾ ಇಲಾಖೆ, (ಸೇವಾ ನಿಯಮಗಳು-2) ನಾಗರತ್ನ ವಿ. ಪಾಟೀಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರ ಪತ್ರವನ್ನು ಉಲ್ಲೇಖಿಸಿ ಈ ಕುರಿತು ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ದಿನಾಂಕ 1/3/2023ರಂದು ನಡೆದ ಮುಷ್ಕರದಲ್ಲಿ ಭಾಗವಹಿಸಿದ ಕಾರಣದಿಂ ದಾಗಿ ಕಛೇರಿಗೆ ಗೈರು ಹಾಜರಾದ ನೌಕರರಿಗೆ ಅಂದಿನ ದಿನವನ್ನು ನೌಕರರ ಹಕ್ಕಿನಲ್ಲಿರುವ ಮತ್ತು ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಿ ಆದೇಶ ಹೊರಡಿಸಲು ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರು ಸರ್ಕಾರವನ್ನು ಕೋರಿದ್ದರು

ಈ ಕೋರಿಕೆಯನ್ನು ಪರಿಶೀಲಿಸಿ ಸರ್ಕಾರವು ಈ ಆದೇಶ ಹೊರಡಿಸಿದೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದಿನಾಂಕ 1/3/2023 ರಂದು ಮುಷ್ಕರ ಮಾಡಿ ಕಚೇರಿಗೆ ಗೈರು ಹಾಜ ರಾದುದನ್ನು ಆ ದಿನಾಂಕದಂದು ನೌಕರರ ಹಕ್ಕಿ ನಲ್ಲಿರುವ ರಜೆ ಅಥವಾ ಪಡೆಯಲು ಅರ್ಹರಿ ರುವ ರಜೆ ಎಂದು ಪರಿಗಣಿಸಲು ಆದೇಶಿಸಿದ

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.