ಕೋಲಾರ –
ಕೋಲಾರದ ಕೆಜಿಎಫ್ ನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಗುಂಪಿನ ಯುವಕರು ಮಾರಾಕಾಸ್ತ್ರಗಳನ್ನ ಹಿಡಿದು ಓಡಾಟ ಮಾಡಿದ್ದಾರೆ.

ಹೀಗೆ ಕೈಯಲ್ಲಿ ಕೆಲ ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳ ಯುವಕರು ತಿರುಗಾಡುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ನಗರ ಹೊರ ವಲಯದ ಪಾರಂಡಹಳ್ಳಿಯಲ್ಲಿರುವ ಉದಯ ನಗರದಲದಲ್ಲಿಂದು ಘಟನೆ ನಡೆದಿದೆ.
ಇತ್ತೀಚೆಗೆ ನಡೆದ ಗ್ತಾಮ ಪಂಚಾಯತ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಕಡೆಯ ಯುವಕ ರಿಂದ ಪುಂಡಾಟ ನಡೆದಿದೆ ಎನ್ನಲಾಗಿದೆ.

ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟವನ್ನ ಪೊಲೀಸರು ಆರಂಭಿಸಿದ್ದಾರೆ.