ದಿನಕ್ಕೊಂದು BRTS ರೂಲ್ಸ್ ಗಳಿಂದ ಬೇಸತ್ತ ಸಾರ್ವಜನಿಕರು – ಒಮ್ಮೆ ಅಲ್ಲೇ ಮತ್ತೊಮ್ಮೆ ಇಲ್ಲೇ ಗೊಂದಲದಲ್ಲಿ ಸಾರ್ವಜನಿಕರು…..ಟ್ರಾಫೀಕ್ ಜಾಮ್ ನಡುವೆ ಹೇಗೆ ಬಸ್ ಹೊಡೆಯಬೇಕು DC ಯವರೇ…..ಒಮ್ಮೆ ನೀವು ಹುಬ್ಬಳ್ಳಿ ಧಾರವಾಡ ಬಸ್ ಡ್ರೈವಿಂಗ್ ಮಾಡಿ ನೋಡಿ…..

Suddi Sante Desk

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಸುಗಮ ಸಾರಿಗೆಯಾಗದೇ ಸಮಸ್ಯೆಗಳ ಸಾರಿಗೆಯಾಗುತ್ತಿದೆ ಎಂಬೊದರಲ್ಲಿ ಎರಡು ಮಾತಿಲ್ಲ. ಹುಬ್ಬಳ್ಳಿಯ ನಗರದ ಹೃದಯ ಭಾಗದಲ್ಲಿರುವ ಚೆನ್ನಮ್ಮ ಸರ್ಕಲ್ ನಲ್ಲಿ ಒಂದು ಕಡೆ ಪ್ಲೈ ಒವರ್ ಕಾಮಗಾರಿಯಿಂ ದಾಗಿ ಹಳೆ ಬಸ್ ನಿಲ್ದಾಣವನ್ನು ಸಧ್ಯ ನಾಲ್ಕು ತಿಂಗಳ ವರೆಗೆ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು ಇದರಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದರೆ

ಇನ್ನೊಂದೆಡೆ ಈ ಒಂದು ಚಿಗರಿ ಬಸ್ ಸಂಚಾರವನ್ನು ಅಧಿಕಾರಿಗಳು ಸುಗಮ ಮಾಡದೇ ದುರ್ಗಮ ಮಾಡ್ತಾ ಇದ್ದಾರೆ ಎಂಬೊದಕ್ಕೆ ಸಧ್ಯ ಕಂಡು ಬರುತ್ತಿರುವ ಚಿತ್ರಣವೇ ಸಾಕ್ಷಿಯಾಗಿದೆ.ನಾಲ್ಕೈದು ವರ್ಷಗಳ ಕಾಲ ಸಂಪೂರ್ಣವಾಗಿ ಬಂದ್ ಆಗಿದ್ದ ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣವನ್ನು ಈಗಷ್ಟೇ ಆರಂಭವಾಗುತ್ತಿದ್ದಂತೆ 100 ಬಸ್ ಗಳನ್ನು ರೇಲ್ವೆ ನಿಲ್ದಾಣದಿಂದ ರದ್ದು ಮಾಡಿ ಹಳೆ ಬಸ್ ನಿಲ್ದಾಣದಿಂದ ಸಂಚಾರ ಮಾಡುವಂತೆ ಡಿಸಿಯವರು ಆದೇಶ ಮಾಡಿದ್ರು.

ಉದ್ಘಾಟನೆಯಾಗಿ ಇನ್ನೂ ಎರಡು ತಿಂಗಳಾಗಿಲ್ಲ ಆಗಲೇ ಮತ್ತೆ ಹಳೆ ಬಸ್ ನಿಲ್ದಾಣವನ್ನು ಬಂದ್ ಆಗುತ್ತಿದ್ದಂತೆ ಇತ್ತ 100 ಬಸ್ ಗಳನ್ನು ಗ್ಲಾಸ್ ಹೌಸ್ ನಿಂದ ಸಂಚಾರ ಮಾಡುವಂತೆ ಆದೇಶವನ್ನು ಮಾಡಿದ್ರು ನಾಲ್ಕೈದು ದಿನಗಳ ಕಾಲ ಬಸ್ ಗಳು ಸಂಚಾರ ಮಾಡಿದ ಬೆನ್ನಲ್ಲೇ ಸಧ್ಯ ಮೊದಲಿನಂತೆ ರೇಲ್ವೆ ನಿಲ್ದಾಣ ದಿಂದ ಸಂಚಾರ ಮಾಡುವಂತೆ ಆದೇಶವನ್ನು ಮಾಡಿದ್ದಾರೆ

ದಿನಕ್ಕೊಂದು ಡಿಸಿಯವರ ನಿಯಮಗಳಿಂದ ಬೇಕಾಬಿಟ್ಟಿಯಾದ ಸೂಚನೆಗಳಿಂದ ಸಾರ್ವಜನಿಕರು ಪರದಾಡುತ್ತಿದ್ದಾರೆ.ಇತ್ತ ಸಧ್ಯ ಚೆನ್ನಮ್ಮ ಸರ್ಕಲ್ ನಿಂದ ರೇಲ್ವೆ ನಿಲ್ದಾಣದವರೆಗೆ ಅಲ್ಲಿಂದ ಪುನಃ ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಗಿರಣಿ ಚಾಳದಿಂದ ಪುನಃ ಗ್ಲಾಸ್ ಹೌಸ್ ಮುಂದೆ ಪ್ರಯಾಣಿಸಿ ಹೊಸೂರ ಕ್ರಾಸ್ ಮುಟ್ಟು ವುದು ದೊಡ್ಡ ಹರಸಾಹಸದ ಕೆಲಸವಾಗಿದ್ದು ಈಗಾಗಲೇ 201B ಬಸ್ ಗಳು ರೇಲ್ವೆ ನಿಲ್ದಾಣದಿಂದ ಸಂಚಾರವನ್ನು ಮಾಡುತ್ತಿದ್ದು ಸಧ್ಯ ಗ್ಲಾಸ್ ಹೌಸ್ ನಿಂದ ಸಂಚಾರ ಮಾಡುತ್ತಿದ್ದ 100 ಬಸ್ ಗಳನ್ನು ಪುನಃ ರೇಲ್ವೆ ನಿಲ್ದಾಣ ದವರೆಗೆ ಮಾಡಲಾಗಿದೆ.ಈ ಒಂದು ನಿಯಮಗಳಿಂದ ಚಾಲಕರು ಕೂಡಾ ಅಸಮಧಾನಗೊಂಡಿದ್ದು

ಇತ್ತ ದಿನಕ್ಕೊಂದು ನಿಮಯಗಳಿಂದ ಸಾರ್ವಜನಿಕರು ಕೂಡಾ ಗೊಂದಲವಾಗಿದ್ದು ಇವರೇನು ಮಾಡ್ತಾ ಇದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.