ಹುಬ್ಬಳ್ಳಿ –
ಕರ್ತವ್ಯದ ನಡುವೆಯೂ ಸಾಮಾಜಿಕ ಜವಾಬ್ದಾರಿ ತೋರಿಸಿಕೊಟ್ಟ ಪೂರ್ವ ಸಂಚಾರಿ ಪೊಲೀಸರು – ಇಬ್ಬರು ಪೊಲೀಸ್ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದ ಸಾರ್ವಜನಿಕರು…..ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಇದಪ್ಪಾ ಹುಬ್ಬಳ್ಳಿ ಪೊಲೀಸರ ಗತ್ತು ಹೌದು
ಸಾಮಾನ್ಯವಾಗಿ ಪೊಲೀಸರು ಎಂದರೆ ಬಿಡುವಿಲ್ಲದ ಕೆಲಸ ಕಾರ್ಯಗಳು ಇದ್ದೇ ಇರುತ್ತವೆ ಅದರಲ್ಲೂ ಸಂಚಾರಿ ಪೊಲೀಸರು ಎಂದರೆ ಇನ್ನೂ ಹೆಚ್ಚು ಕೆಲಸಗಳೊಂದಿಗೆ ಸಂಚಾರಿ ನಿಯಂತ್ರಣ ಸೇರಿದಂತೆ ಬೇರೆ ಬೇರೆ ಬಿಡುವಿಲ್ಲದ ಡೂಟಿಯ ನಡುವೆಯೂ ಕೂಡಾ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸರು ಕರ್ತವ್ಯದ ನಡುವೆಯೂ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿಕೊಟ್ಟಿದ್ದಾರೆ.
ಹೌದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸಾರಿಗೆ ಬಸ್ ವೊಂದು ಕೆಟ್ಟು ನಿಂತುಕೊಂಡಿತು ಈ ಒಂದು ಸಮಸ್ಯೆಯನ್ನು ತುರ್ತಾಗಿ ಗಮನಿಸಿದ ಕರ್ತವ್ಯದ ಮೇಲಿದ್ದ ಪೂರ್ವ ಸಂಚಾರಿ ಪೊಲೀಸ್ ಸಿಬ್ಬಂದಿಗಳಾದ ಎನ್ ಪಿ ಬಿರಾದಾರ, ಮತ್ತು ಈರಣ್ಣ ಕುಂಬಾರ ಇನ್ನೇನು ಸಾಕಷ್ಟು ಪ್ರಮಾಣದಲ್ಲಿ ಸಂಚಾರ ದಟ್ಟನೆ ಆಗುತ್ತದೆ ಎಂದುಕೊಂಡು ರಸ್ತೆ ಮಧ್ಯದಲ್ಲಿ ನಿಂತುಕೊಂಡಿದ್ದ ಸಾರಿಗೆ ಬಸ್ ನ್ನು ಸಾರ್ವಜನಿಕರ ನೆರವಿನೊಂ ದಿಗೆ ತಳ್ಳಿದರು.ಬಿಡುವಿಲ್ಲದ ಕರ್ತವ್ಯದ ನಡುವೆ ಯೂ ಕೂಡಾ ಇಬ್ಬರು ಪೊಲೀಸ್ ಸಿಬ್ಬಂದಿಗಳು ರಸ್ತೆ ಮಧ್ಯದಲ್ಲಿ ನಿಂತುಕೊಂಡಿದ್ದ ಬಸ್ ನ್ನು ತಳ್ಳುತ್ತಾ ತಳ್ಳುತ್ತಾ ಚೆನ್ನಮ್ಮ ಸರ್ಕಲ್ ಗೆ ತಗೆದುಕೊಂಡು ಬಂದು ರಸ್ತೆ ಪಕ್ಕದಲ್ಲಿ ನಿಲ್ಲಿಸಿದರು
ಈ ಒಂದು ಇಬ್ಬರು ಪೊಲೀಸ್ ಸಿಬ್ಬಂದಿಗಳೊಂ ದಿಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೂಡಾ ಕೈ ಜೋಡಿಸಿದರು.ಇನ್ನೂ ಪೂರ್ವ ಸಂಚಾರಿ ಪೊಲೀಸರ ಕಾರ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಠಾಣೆಯ ಪೊಲೀಸ್ ಇನ್ಸ್ಪೆಕರ್ ಜಾಕ್ಸನ್ ಡಿಸೋಜಾ, ಪಿಎಸ್ಐ ಪುನೀತ್ ಕುಮಾರ ಸೇರಿದಂತೆ ಹಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……