ವಿಜಯನಗರ –
ಸಾಮಾನ್ಯವಾಗಿ ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳೊದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಶಯನಿಗೆ ಹಾವು ಕಚ್ಚಿದ್ದು ಅದನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ.
ಹೌದು ಕಚ್ಚಿದ ನಾಗರ ಹಾವನ್ನೇ ಹಿಡಿದು ಆಸ್ಪತ್ರೆಗೆ ಬಂದಿದ್ದಾನೆ ಯುವಕನೊಬ್ಬ ಇಂತಹ ದೊಂದು ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾ ರಳ್ಳಿಯಲ್ಲಿ ನಡೆದಿದೆ.
ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ಗೊತ್ತಾದರೆ ಸೂಕ್ತ ಚಿಕಿತ್ಸೆ ಸಿಗುವುದು ಗೊತ್ತಿತ್ತಂತೆ ಕಾಡಪ್ಪನಿಗೆ ಹೀಗಾಗಿ ಕಂಪ್ಲಿಗೆ ಬಂದು ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ ಕಾಡಪ್ಪ.
ಕಾಡಪ್ಪನ ಎದೆಗಾರಿಕೆ ಕಂಡು ಬೆಚ್ಚಿ ಬಿದ್ದಿದ್ದಾರೆ ಗ್ರಾಮಸ್ಥರು.ಪ್ರಾಥಮಿಕ ಚಿಕಿತ್ಸೆ ನೀಡುವ ಸಂದರ್ಭ ದಲ್ಲಿಯೂ ಕೈಯಲ್ಲಿ ಹಾವನ್ನ ಹಿಡಿದು ಮಲಗಿದ್ದ ಕಾಡಪ್ಪ