ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಪಂಜಾಬ್ ಮುಖ್ಯಮಂತ್ರಿ – ಹಳೆಯ ಪಿಂಚಣಿ ಯೋಜನೆ ಜಾರಿಗೆ ಅನುಮೋದನೆ ನೀಡಿ ಆದೇಶ ಮಾಡಿದ ಸರ್ಕಾರ

Suddi Sante Desk
ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಪಂಜಾಬ್ ಮುಖ್ಯಮಂತ್ರಿ – ಹಳೆಯ ಪಿಂಚಣಿ ಯೋಜನೆ ಜಾರಿಗೆ ಅನುಮೋದನೆ ನೀಡಿ ಆದೇಶ ಮಾಡಿದ ಸರ್ಕಾರ

ಪಂಜಾಬ್

ಒಂದು ಕಡೆಗೆ ದೇಶದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟಗಳು ನಡೆಯುತ್ತಿದ್ದರೆ ಮತ್ತೊಂದೆಡೆ ದೇಶದ ಹಲವು ರಾಜ್ಯಗಳಲ್ಲಿ ಈ ಒಂದು ಯೋಜನೆಗಳನ್ನು ಜಾರಿಗೆ ತರುವ ಕುರಿತಂತೆ ಆದೇಶಗಳು ಆಗುತ್ತಿ ದ್ದು ಈಗ ಪಂಜಾಬ್ ಸರ್ಕಾರ ಅನುಮೋದನೆ ನೀಡಿದೆ.ಹಳೆಯ ಪಿಂಚಣಿ ಯೋಜನೆ(OPS) ರಾಜಕೀಯ ಸಮಸ್ಯೆಯಾಗಿ ಬದಲಾಗುತ್ತಿರು ವಾಗ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಯೋಜನೆ ಯನ್ನು ಮರುಸ್ಥಾಪಿಸು ವುದಾಗಿ ಭರವಸೆ ನೀಡುತ್ತಿರುವ ಸಮಯದಲ್ಲಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದಲ್ಲಿ OPS ಅನುಷ್ಠಾನಕ್ಕೆ ಅಧಿ ಸೂಚನೆಗೆ ಅನುಮೋದಿಸಿದೆ

 

ನಿರ್ಧಾರದಿಂದ 1.75 ಲಕ್ಷ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ.ಪ್ರಸ್ತುತ ಸುಮಾರು 1.26 ಲಕ್ಷ ನೌಕರರು ಈಗಾಗಲೇ ಹಳೆಯ ಪಿಂಚಣಿ ಯೋಜನೆಗೆ ಒಳಪಟ್ಟಿದ್ದಾರೆ ಪ್ರಸ್ತುತ ಹೊಸ ಪಿಂಚಣಿ ಯೋಜನೆ(ಎನ್‌.ಪಿ.ಎಸ್)ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬಹುಕಾ ಲದ ಬೇಡಿಕೆಯಾಗಿದೆ.ಒಪಿಎಸ್ ವಿಷಯವು ಈಗ ರಾಜಕೀಯ ವಿಚಾರವಾಗಿದೆ.

ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ(ಎಎಪಿ) ನಂತಹ ಪಕ್ಷಗಳು ತಮ್ಮ ಚುನಾವಣಾ ಭರವಸೆ ಗಳ ಭಾಗವಾಗಿ ಯೋಜನೆಯನ್ನು ಮರುಸ್ಥಾಪಿ ಸುತ್ತಿವೆ. ರಾಜಸ್ಥಾನ ಮತ್ತು ಛತ್ತೀಸ್‌ಗಢದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಸಹ ಯೋಜನೆಯನ್ನು ಮರುಸ್ಥಾಪಿಸುವ ಪ್ರಕ್ರಿಯೆ ಯಲ್ಲಿವೆ.ಕರ್ನಾಟಕದಲ್ಲಿಯೂ ಎನ್.ಪಿ.ಎಸ್. ನೌಕರರು ಹಳೆ ಪಿಂಚಣಿಗಾಗಿ ಹೋರಾಟ ನಡೆಸು ತ್ತಿದ್ದು ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಂಡಿದ್ದು 2ಲಕ್ಷಕ್ಕೂ ಹೆಚ್ಚು ನೌಕರರು ಪಾಲ್ಗೊಂಡು ಶಕ್ತಿ ಪ್ರದರ್ಶನದೊಂದಿಗೆ ಬೇಡಿಕೆ ಈಡೇರಿಕೆಗೆ ಒತ್ತಾಯವನ್ನು ಮಾಡಲಿದ್ದಾರೆ.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.