This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ಧಾರವಾಡ ದಲ್ಲಿ ಆರಂಭಗೊಂಡ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟ ಆರಂಭ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸರ್ಕಾರಿ ನೌಕರ ಬಂಧುಗಳು…..


ಧಾರವಾಡ

ಕ್ರೀಡೆಯಲ್ಲಿ ಗೆದ್ದರೆ ಸಂತೋಷ ಸೋತರೆ ಅನುಭವ ಎನ್ನುವ ಸಮತೋಲಿತ ಭಾವ ಇರಬೇಕು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಹೇಳಿದರು.ಕ್ರೀಡಾ ಚಟುವಟಿಗ ಳಲ್ಲಿ ಭಾಗವಹಿಸುವದರಿಂದ ಕೆಲಸದಲ್ಲಿ ಲವಲ ವಿಕೆ ಮತ್ತು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ.

ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಗೆದ್ದರೆ ಸಂತೋಷ ಪಡಬೇಕು ಮತ್ತು ಸೋತರೆ ಅದು ಅನುಭವ ಎಂದು ತಿಳಿದು ಸಮಾಧಾನ ಪಟ್ಟುಗೊಳ್ಳಬೇಕು.ಈ ಸಮತೋಲಿತ ಭಾವ ಇದ್ದರೆ ಮಾತ್ರ ಕ್ರೀಡೆ ಆನಂದಿಸಲು ಸಾಧ್ಯವಾಗು ತ್ತದೆ ಎಂದರು.

ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಕಾಡಳಿತ,ಜಿಲ್ಲಾ ಪಂಚಾಯತ,ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ  ಆಯೋಜಿಸಿರುವ ಎರಡು ದಿನಗಳ ಜಿಲ್ಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ದೇಸಿಯ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಪ್ರೋತ್ಸಾಹಿಸಿ,ಉಳಿಸಿ ಬೆಳೆಸಲು ಸರಕಾರ ಮತ್ತು ಮಹಾನಗರ ಪಾಲಿಕೆಯಿಂದ ಸಾಕಷ್ಟು ಅನುದಾನ ನೀಡಲಾಗುತ್ತಿದೆ.ಸರಕಾರಿ ನೌಕರರ ಕ್ರೀಡಾ ಚಟುವಟಿಕೆಗಳಿಗೆ ಪಾಲಿಕೆ ಯಿಂದ ಆರ್ಥಿಕ ಸಹಾಯ ನೀಡಲಾಗಿದೆ.

ಸರಕಾರ ನೀಡಿರುವ ಸೇವೆಯ ಅವಕಾಶವನ್ನು ನೌಕರರು ಸದುಪಯೋಗಪಡಿಸಿಕೊಂಡು ಸಾರ್ವ ಜನಿಕರಿಗೆ ಉತ್ತಮ ಸೇವೆ ನೀಡಬೇಕೆಂದುಅವರು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿ,ಒತ್ತಡದ ಕೆಲಸಗಳ ಮದ್ಯೆಯೂ ನೌಕರರಿಗೆ ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಉಲ್ಲಾಸದಿಂದ,ವಿಶ್ರಾಂತಿ ಯಿಂದ  ತೊಡಗಿಕೊಳ್ಳಲು ಸಹಾಯವಾಗುತ್ತದೆ. ದಕ್ಕಾಗಿ ಪ್ರತಿ ವರ್ಷ ಸರಕಾರಿ ನೌಕರ ಸಂಘ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತದೆ ಎಂದರು.

ಇನ್ನೂ ರಾಜ್ಯ ಸರಕಾರ ಈಗಾಗಲೇ 7 ನೇ ವೇತನ ಆಯೋಗ ಜಾರಿಯ ಭರವಸೆ ನೀಡಿ ಆಯೋಗ ರಚಿಸಿ ಆದೇಶಿಸಿದೆ. ಮತ್ತು ನಮ್ಮ ಮುಂದಿನ ಹೋರಾಟ ಎನ್.ಪಿ.ಎಸ್. ರದ್ದತಿಯಾಗಬೇಕು ಹಾಗೂ ಓಪಿಎಸ್ ಜಾರಿಯಾಗಬೇಕು.

ಈ ಕುರಿತು ನಮ್ಮ ಎಲ್ಲ ನೌಕರರ ಬೇಡಿಕೆಗೆ ಅನುಗುಣವಾಗಿ ಮುಂದಿನ ಹಂತದಲ್ಲಿ ನೌಕರ ಸಂಘದ ರಾಜ್ಯಾದ್ಯಕ್ಷರ  ಕೇಂದ್ರ ಘಟಕದ ನೇತೃತ್ವದಲ್ಲಿ ತೀವ್ರ ಹೋರಾಟ ಮಾಡಲಾಗು ವುದು ಎಂದು ಜಿಲ್ಲಾದ್ಯಕ್ಷ ಎಸ್.ಎಫ್. ಸಿದ್ದನ ಗೌಡರ ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ರಾಜ್ಯ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ  ಅವರು ಮಾತನಾಡಿ ಕಳೆದ ಸಾಲಿನ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟ ದಲ್ಲಿ ಜಿಲ್ಲೆಯ 20 ಜನ ನೌಕರರು ಪ್ರಶಸ್ತಿ ವಿಜೇತ ರಾಗಿದ್ದು ಮುಂದಿನ ವರ್ಷ ಹೆಚ್ಚು ಜನ ಭಾಗವ ಹಿಸಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಹೇಳಿದರು.

ವೇದಿಕೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ರಾದ ಡಾ.ಗೋಪಾಲ ಕೃಷ್ಣ ಬಿ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ,ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಸರಶೆಟ್ಟಿ,ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ,ಖಜಾಂಚಿ ರಾಜಶೇಖರ ಬಾಣದ, ನೌಕರ ಭವನದ ಕಾರ್ಯದರ್ಶಿ ಗಿರೀಶ ಚೌಡಕಿ, ತಾಲೂಕು ಅಧ್ಯಕ್ಷರಾದ ಡಾ.ಪ್ರಲ್ಹಾದ ಗೆಜ್ಜಿ, ವ್ಹಿ.ಎಫ್.ಚುಳಕಿ, ಎ.ಬಿ.ಕೊಪ್ಪದ, ಆರ್.ಎಂ. ಹೊಲ್ತಿಕೋಟಿ, ಎಸ್.ಎನ್.ಅರಳಿಕಟ್ಟಿ, ಕ್ರೀಡಾ ಕಾರ್ಯದರ್ಶಿ ಸುರೇಶ ಜಟ್ಟೆನ್ನವರ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪಿ.ಬಿ.ಕುರಬೆಟ್ಟ, ಬಿ.ಎಚ್. ಕುರಿಯವರ, ಜಿಲ್ಲಾ ಪದಾಧಿಕಾರಿಗಳಾದ ರಾಜಶೇಖರ ಹೊನ್ನಪ್ಪನವರ, ಸಿ.ಸಿ.ಹಿರೇಮಠ, ಎಫ್.ವ್ಹಿ.ಮಂಜಣ್ಣವರ,ರಾಜಶೇಖರ ಕೊನರಡ್ಡಿ,  ಶಾಂತಾ ಶೀಲವಂತರ,ಫೀರೋಜ ಗುಡೆನಕಟ್ಟಿ, ಚಂದ್ರು ತಿಗಡಿ, ರವಿಕುಮಾರ ಹಾಗೂ ಸಿದ್ದು ಐರಣಿ, ಬಿ.ಎಂ.ಪಾಟೀಲ, ಆರ್.ಸಿ.ದೇಸಾಯಿ, ಎಂ.ಕೆ‌.ಭಾಗಿ ಹಾಗೂ  ಇತರರು ಇದ್ದರು.

ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ  688 ಪುರುಷ ಹಾಗೂ 434 ಜನ ಮಹಿಳೆಯರು ಸೇರಿ ಒಟ್ಟು 1,138 ಜನ ನೌಕರ ಕ್ರೀಡಾಪಟುಗಳು ಭಾಗವ ಹಿಸಿದ್ದಾರೆ.ಎರಡು ದಿನಗಳ ಜಿಲ್ಲಾ ಕ್ರೀಡಾಕೂಟ ದಲ್ಲಿ ಒಟ್ಟು 15 ಗುಂಪು ಸ್ಪರ್ಧೆಗಳು ಮತ್ತು 40 ಅಥ್ಲೆಟಿಕ್ ಆಟಗಳು,ತೂಕವಾರು 22 ತರಹದ ಕುಸ್ತಿಗಳು,12 ತರಹದ  ಈಜು ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ.ಸ್ಪರ್ಧೆಗಳ ನಿರ್ಣಾಯಕ ರಾಗಿ  ವಿವಿದ ಸರಕಾರಿ ಪ್ರಾಥಮಿಕ, ಪ್ರೌಢಶಾ ಲೆಗಳ ಸುಮಾರು 144 ಜನ ದೈಹಿಕ ಶಿಕ್ಷಕರು ಭಾಗವಹಿಸಿದ್ದಾರೆ.

ಕಳೆದ ಸಾಲಿನ ಸರಕಾರಿ ನೌಕರರ ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ, ಪ್ರಶಸ್ತಿ ವಿಜೇತರಾದ ಸರಕಾರಿ ನೌಕರ ಹೆಸರುಗಳನ್ನು ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ವೇದಿಕೆ ಯಲ್ಲಿ ಪ್ರಸ್ತುತಪಡಿಸಿದರು. ಮತ್ತು ಗಣ್ಯರು ಸಂಘದ ಪರವಾಗಿ ಸನ್ಮಾನಿಸಿದರು.

ಬಿ.ಆರ್.ಸಿ. ಜಯಲಕ್ಷ್ಮಿ ಎಚ್. ಪ್ರಾರ್ಥಿಸಿದರು. ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು.ಪ್ರಕಾಶ ಕಂಬಳಿ ನೇತೃತ್ವದ ಸಿರಿಗಂದ ಕಲಾ ತಂಡದವರು ನಾಡಗೀತೆ ಹಾಡಿದರು. ಸಂಘದ ಗೌರವಾಧ್ಯಕ್ಷ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಚೌಡಕಿ  ವಂದಿಸಿದರು.ವಿವಿಧ ಇಲಾಖೆಗಳ ನೌಕರರು,ಕ್ರೀಡಾಪಟುಗಳು,ಅವರ ಕುಟುಂಬ ಸದಸ್ಯರು ಕಾರಗಯಕ್ರಮದಲ್ಲಿ ಭಾಗವಹಿಸಿದ್ದರು

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News Join The Telegram Join The WhatsApp

 

 

Suddi Sante Desk

Leave a Reply