ಬೆಂಗಳೂರು –
ಸದನದಲ್ಲಿ ಸದ್ದು ಮಾಡಿದ 7ನೇ ವೇತನ ಆಯೋಗದ ವರದಿ – ಈ ಕೂಡಲೇ ವರದಿಯನ್ನು ಜಾರಿಗೆ ತಗೆದುಕೊಂಡು ಬನ್ನಿ ಕೇಳಿ ಬಂದಿತು ಒತ್ತಾಯ
ರಾಜ್ಯದ ಸರ್ಕಾರಿ ನೌಕರ ವೇತನ ಪರಿಷ್ಕ್ರರಣೆ ಕುರಿತಂತೆ ರಚನೆ ಮಾಡಲಾಗಿರುವ 7ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಅಧಿವೇಶನದಲ್ಲಿ ಒತ್ತಾಯ ಕೇಳಿ ಬಂದಿತು.ಹೌದು ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7ನೇ ವೇತನ ಆಯೋಗದ ವರದಿಯನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈಗಾಗಲೇ ಈ ಒಂದು ಆಯೋಗವನ್ನು ರಚನೆ ಮಾಡಿ ಎರಡು ವರ್ಷ ಗಳಾಗುತ್ತಾ ಬಂದಿದ್ದು ಹೀಗಾಗಿ ಸಧ್ಯ ಮಾರ್ಚ್ ತಿಂಗಳಿಗೆ ಮತ್ತೆ ಅವಧಿ ಕೂಡಾ ಮುಕ್ತಾಯ ವಾಗಲಿದ್ದು ಲೋಕಸಭೆ ಚುನಾವಣೆ ಘೋಷಣೆ ಯಾಗುವ ಮುನ್ನ ಕೂಡಲೇ ಆಯೋಗದಿಂದ ವರದಿಯನ್ನು ತರಿಸಿಕೊಂಡು ಈ ಒಂದು ವರದಿ ಯನ್ನು ಜಾರಿಗೆ ತಗೆದುಕೊಂಡು ಬಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಹಿತವನ್ನು ಕಾಪಾಡು ವಂತೆ ಒತ್ತಾಯವನ್ನು ಮಾಡಿದರು.
ಇವರ ಒಂದು ಮಾತಿಗೆ ಸದನದಲ್ಲಿದ್ದ ಹಲವು ಸದಸ್ಯರು ಧ್ವನಿಗೂಡಿಸಿ ಕೂಡಲೇ ವರದಿಯನ್ನು ಜಾರಿಗೆ ತಗೆದುಕೊಂಡು ಬಂದು ಕಳೆದ ಹಲವು ವರ್ಷಗಳಿಂದ ಈ ಒಂದು ವಿಚಾರವನ್ನು ಒತ್ತಾಯ ಮಾಡುತ್ತಿರುವ ರಾಜ್ಯದ ಸರ್ಕಾರಿ ನೌಕರರ ಹಿತವನ್ನು ಕಾಪಾಡುವಂತೆ ಆಗ್ರಹವನ್ನು ಮಾಡಲಾಯಿತು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..