ಅಂಕೋಲ –
ಪಾಠ ಮಾಡುತ್ತಿರುವಾಗಲೇ ಸರ್ಕಾರಿ ಶಾಲೆಯೊಂದರ ಮೇಲ್ಛಾವಣೆಯೊಂದು ಕುಸಿದು ಬಿದ್ದು ನಾಲ್ಕೈದು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉತ್ತರ ಕನ್ನಡದ ಅಂಕೋಲ ಪಟ್ಟಣದಲ್ಲಿರುವಂತ ಶಾಲೆಯೊಂದರಲ್ಲಿ ನಡೆದಿದೆ. ಮೇಲ್ಛಾವಣಿ ಕುಸಿತಗೊಂಡ ಪರಿಣಾಮ ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವಂತ ನಿರ್ಮಲ ಹೃದಯ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯ ಮೇಲ್ಛಾವಣಿ ಇಂದು ಕುಸಿತಗೊಂ ಡಿದೆ.

ಇದೇ ಸಂದರ್ಭದಲ್ಲಿ ತರಗತಿ ನಡೆಯುತ್ತಿದ್ದ ಕಾರಣ, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.ಇನ್ನೂ ಗಾಯಾಳು ವಿದ್ಯಾರ್ಥಿಗಳನ್ನು ನಾಲ್ಕನೇ ತರಗತಿಯ ಸಫಲ್ ಡಿ ಚಿಂಚರಕರ,ಅಮೋಘ ನಾಯ್ಕ್,ಸುಹಾನಿ ಶೇಡಗೇರಿ, ಸೃಷ್ಠಿ ಎಸ್ ನಾಯ್ಕ್ ಹಾಗೂ ಒಂದೇ ತರಗತಿ ವಿದ್ಯಾರ್ಥಿ ಸದ್ವಿನ್ ಡಿ ಚಿಂಚರಕರ ಎಂಬುವರಾಗಿದ್ದಾರೆ

ಈ ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.ಅಂದ ಹಾಗೇ 4ನೇ ತರಗತಿಯ ಕೊಠಡಿಯಲ್ಲಿ 68 ವಿದ್ಯಾರ್ಥಿಗಳಿದ್ದರು. ಆದ್ರೇ ಊಟದ ಸಮಯದಲ್ಲಿ ಮೇಲ್ಛಾವಣಿ ಕುಸಿತದ ಸಂದರ್ಭ ದಲ್ಲಿ 16 ವಿದ್ಯಾರ್ಥಿಗಳು ಮಾತ್ರವಿದ್ದರು ಎಂದು ತಿಳಿದು ಬಂದಿದೆ.