ಬೆಂಗಳೂರು –

ರಾಜ್ಯದಲ್ಲಿ ಕರೋನಾ ಕಾಟ ಇನ್ನೂ ಕಡಿಮೆಯಾಗಿಲ್ಲ ಒಂದು ಕಡೆ ಪಾಸಿಟಿವಿಟಿ ಕಡಿಮೆಯಾದ ಜಿಲ್ಲೆಗಳಲ್ಲಿ ಈಗಾಗಲೇ ಲಾಕ್ ಡೌನ್ ಸಡಿಲಿಕೆ ಮಾಡಿದರೂ ಕೂಡಾ ಪೂರ್ಣ ಪ್ರಮಾಣದಲ್ಲಿ ಯಾವುದಕ್ಕೂ ಅವಕಾಶವನ್ನು ನೀಡಿಲ್ಲ ಹೀಗಾಗಿ ಎಲ್ಲವೂ ಅರ್ಧಂ ಬರ್ಧವಾಗಿದ್ದು ಇವೆಲ್ಲದರ ನಡುವೆ ನಾಳೆಯಿಂದ ಶಾಲೆಗಳಿಗೆ ಶಿಕ್ಷಕರನ್ನು ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗಲು ಆದೇಶವನ್ನು ನೀಡಿದ್ದು ಶಿಕ್ಷಕರು ಕೂಡಾ ಶಾಲೆಗಳಿಗೆ ಬರಲು ಒಮ್ಮತಿಯನ್ನು ಸೂಚಿ ಸಿದ್ದಾರೆ ಆದರೆ ಪ್ರಮುಖವಾಗಿ ಒಂದು ಕಡೆ ಇನ್ನೂ ಕಡಿಮೆಯಾಗದ ಕರೋನಾ ಕಾಟ ಆರಂಭವಾಗದ ಬಸ್ ಸಂಚಾರ ಹೀಗಾಗಿ ನಾಳೆಯಿಂದ ಶಾಲೆಗಳಿಗೆ ಹೇಗೆ ಹೊಗಬೇಕು ಎಂಬ ಚಿಂತೆಯಲ್ಲಿ ನಾಡಿನ ಶಿಕ್ಷಕರಿದ್ದಾರೆ. ಇವೆಲ್ಲದರ ನಡುವೆ ಈಗಾಗಲೇ ಇನ್ನೂ ಹದಿನೈದು ದಿನಗಳ ಕಾಲ ಶಾಲೆಗಳಿಗೆ ರಜೆ ಯನ್ನು ಮುಂದೂಡಿಕೆ ಮಾಡಿ ಹದಿನೈದು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡಲು ಅವಕಾಶ ವನ್ನು ನೀಡಿ ನೀಡಿ ಎಂದು ಕಳೆದ ಐದಾರು ದಿನಗ ಳಿಂದ ನಾಡಿನ ಶಿಕ್ಷಕರು ಇವರ ಧ್ವನಿಯಾಗಿ ಶಿಕ್ಷಕರ ಸಂಘಟನೆಯ ಲೀಡರ್ಸ್ ಗಳು ಹಾಗೇ ವಿಧಾನ ಪರಿಷತ್ ಸದಸ್ಯರು ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಮನವಿ ಯನ್ನು ಮಾಡಿಕೊಂಡಿದ್ದಾರೆ. ಆದರೂ ಕೂಡಾ ಕೇಳಿ ಕೇಳಲಾರದಂತೆ ಇದ್ದಾರೆ ಇವೆಲ್ಲದರ ನಡುವೆ ನಾಳೆ ಶಾಲೆಗಳಿಗೆ ಹೋಗಲಾರದೆ ಬಸ್ ನಿಲ್ದಾಣಗಳಲ್ಲಿ ಯೇ ಗ್ರಾಮೀಣ ಶಿಕ್ಷಕರು ಪ್ರತಿಭಟನೆ ಮಾಡಲು ನಿರ್ಧಾರವನ್ನು ಕೈಗೊಂಡಿದ್ದಾರೆ. ಬಸ್ ಗಳಿಲ್ಲದೇ ಹೇಗೆ ಹೋಗಬೇಕು ಎಂಬ ಕುರಿತಂತೆ ಪರಿಜ್ಞಾನವಿ ಲ್ಲದೇ ಆದೇಶ ನೀಡಿದ್ದು ದುರಂತದ ವಿಚಾರವಾಗಿ ದ್ದು ಹೀಗಾಗಿ ಇದರಿಂದ ಬೇಸತ್ತ ನಾಡಿನ ಗ್ರಾಮೀಣ ಶಿಕ್ಷಕರು ನಾಳೆ ಬಸ್ ನಿಲ್ದಾಣಗಳಲ್ಲಿಯೇ ಮೌನವಾ ಗಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಇದ ರೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿ ದ್ದಾರೆ.