ಧಾರವಾಡದಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಲು ಸಜ್ಜಾಗುತ್ತಿದೆ ಸಮಾನ ಮನಸ್ಕರ ವೇದಿಕೆ – ಪಕ್ಷಾತೀತವಾಗಿ ರಚನೆಗೊಳ್ಳುತ್ತಿದ್ದೆ ಸಮಾನ ಮನಸ್ಕರರ ವೇದಿಕೆ ನಡೆಯಿತು ಪೂರ್ವಭಾವಿ ಸಭೆ…..

Suddi Sante Desk
ಧಾರವಾಡದಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಲು ಸಜ್ಜಾಗುತ್ತಿದೆ ಸಮಾನ ಮನಸ್ಕರ ವೇದಿಕೆ – ಪಕ್ಷಾತೀತವಾಗಿ ರಚನೆಗೊಳ್ಳುತ್ತಿದ್ದೆ ಸಮಾನ ಮನಸ್ಕರರ ವೇದಿಕೆ ನಡೆಯಿತು ಪೂರ್ವಭಾವಿ ಸಭೆ…..

ಧಾರವಾಡ

ಧಾರವಾಡದಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಲು ಸಜ್ಜಾಗುತ್ತಿದೆ ಸಮಾನ ಮನಸ್ಕರ ವೇದಿಕೆ – ಪಕ್ಷಾ ತೀತವಾಗಿ ರಚನೆಗೊಳ್ಳುತ್ತಿದ್ದೆ ಸಮಾನ ಮನಸ್ಕ ರರ ವೇದಿಕೆ ನಡೆಯಿತು ಪೂರ್ವಭಾವಿ ಸಭೆ

ಧಾರವಾಡ ಶಹರದಲ್ಲಿನ ಸಾರ್ವಜನಿಕರ ಸಮಸ್ಯೆ ಗಳಿಗೆ ಮುಕ್ತಿ ನೀಡಲು ಧ್ವನಿ ಎತ್ತಲು ಸಂಘಟನೆ ಯೊಂದು ರಚನೆಗೊಳ್ಳುತ್ತಿದೆ.ಹೌದು ಈಗಾಗಲೇ ಸಾಕಷ್ಟು ಸಂಘಟನೆಗಳಿದ್ದರೂ ಕೂಡಾ ಅವೆಲ್ಲ ವುಗಳ ನಡುವೆ ವಿಭಿನ್ನವಾಗಿ ಸಾರ್ವಜನಿಕರ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತುವ ಉದ್ದೇಶ ದಿಂದ ವಿವಿಧ ರಂಗಗಳಲ್ಲಿರುವವರು ಸೇರಿ ಕೊಂಡು ವೇದಿಕೆಯೊಂದನ್ನು ಹುಟ್ಟು ಹಾಕುತ್ತಿ ದ್ದಾರೆ.

ಈ ಒಂದು ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಮಾಡಲಾಯಿತು.ಪ್ರಮುಖವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಹೋರಾಟ ಮಾಡುವ ಉದ್ದೇಶ ದಿಂದ ಈ ಒಂದು ಸಂಘಟನೆಯನ್ನು ಹುಟ್ಟುಹಾ ಕಲಾಗುತ್ತಿದ್ದು ಧಾರವಾಡ ಶಹರದ ಸಾರ್ವಜನಿಕ ಸಮಸ್ಯೆಗಳ ಕುರಿತು ಹೋರಾಟ ಕೈಕೊಳ್ಳುವ ಸಲುವಾಗಿ ನೂತನ ಸಂಘಟನೆಯೊಂದನ್ನು ಅಸ್ತಿತ್ವಕ್ಕೆ ತರಲು ಸಮಾನ ಮನಸ್ಕರ ಸಭೆಯನ್ನು ಮಾಡಲಾಯಿತು.

ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಹುಬ್ಬಳ್ಳಿ,-
ಧಾರವಾಡ ಅವಳಿ ನಗರದ ನಡುವಿನ BRTS ಬಸ್ ಸಂಚಾರ ಅವ್ಯವಸ್ಥೆಯಿಂದ ಸರ್ವಜನಿಕ ರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಂಭೀರ ವಾಗಿ ಚರ್ಚಿಸಲಾಯಿತು..

ಅಲ್ಲದೇ ಮುಂಬರುವ ದಿನಗಳಲ್ಲಿ ಇತರ ಸಮಸ್ಯೆಗಳು ಮೂಲಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಹೋರಾಟದ ಮೂಲಕ ಸರಕಾರದ ಗಮನಕ್ಕೆ ತರುವುದು ಸೇರಿದಂತೆ ಇತರ ಕೆಲವೊಂ ದಿಷ್ಟು ಚಟುವಟಿಕೆಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಾರ್ವಜನಿಕರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಳ್ಳುವ ಉದ್ದೇಶದಿಂದ ಸಂಘಟಿತವಾಗಬೇಕು.ಇದಕ್ಕೆ ವಿವಿಧ ಕ್ಷೇತ್ರಗ ಳಲ್ಲಿ ನಿರತರಾದವರನ್ನು ಸೇರಿಸಿಕೊಂಡು ಹೊಸ ಸಂಘಟನೆಯನ್ನು ನೊಂದಣಿ ಮಾಡಿಸಲು ಸರ್ವಾನುಮತದಿಂದ ಒಪ್ಪಿಗೆಯನ್ನು ಸೂಚಿಸಲಾ ಯಿತು‌.

ಮುಂದಿನ ಚಟುವಟಿಕೆಗಳನ್ನು ಕೈಕೊಳ್ಳಲು ಈಶ್ವರ ಶಿವಳ್ಳಿ ಅವರಿಗೆ ಸಂಪೂರ್ಣ ಅಧಿಕಾರ ವನ್ನು ಸಭೆಯಲ್ಲಿ ನೀಡಲಾಯಿತು.ಸಂಘಟನೆಯ ಸಂಚಾಲಕರಾಗಿ ಮಂಜುನಾಥ ನಡಟ್ಟಿ ನೇಮಕ ವನ್ನು ಮಾಡಲಾಯಿತು.ಸಭೆಯಲ್ಲಿ ಪಾಲಿಕೆ ಸದಸ್ಯ ಶಂಭುಗೌಡ ಸಾಲಮನಿ,ನ್ಯಾಯವಾದಿ ಸಂತೋಷ ಪಟ್ಟಣಶೆಟ್ಟಿ,

ಮುಖಂಡರಾದ ವೆಂಕಟೇಶ ರಾಯ್ಕರ್, ಪುಂಡಲೀಕ ತಳವಾರ,ಪರಮೇಶ್ವರ ಕಾಳೆ, ಬಸವರಾಜ ಪೊಮೋಜಿ,ಇಮ್ರಾನ ತಾಳಿಕೋಟಿ,ಮಂಜು ನೀರಲಕಟ್ಟಿ,ಮುತ್ತು ಬೆಳ್ಳಕ್ಕಿ,ಪರಮೇಶ್ವರ ಉಳವಣ್ಣವರ, ಪತ್ರಕರ್ತ ರಾದ ಪುಂಡಲೀಕ ಹಡಪದ, ಕೇದಾರನಾಥ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.