ಬೆಂಗಳೂರು –
23 ಕೆಎಎಸ್ ಅಧಿಕಾರಿಗಳಿಗೆ IAS ಹುದ್ದೆಯ ಭಡ್ತಿಯನ್ನು ನೀಡಲಾಗಿದೆ. 2006, 2008 ಮತ್ತು 2010ನೇ ಸಾಲಿನ ಒಟ್ಟು 23 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಶ್ರೇಣಿಗೆ ಬಡ್ತಿ ನೀಡಲಾಗಿದೆ. 2016 ರ ಸಾಲಿನಲ್ಲಿ 10, 2017 ರಲ್ಲಿ ಇಬ್ಬರು, 2018 ರಲ್ಲಿ ಮೂವರು, 2019ನೇ ಸಾಲಿಗೆ ಸಂಬಂಧಿಸಿದಂತೆ 8 ಅಧಿಕಾರಿಗಳಿಗೆ ಹೀಗೆ ಪದೋನ್ನತಿಯನ್ನು ನೀಡಲಾಗಿದೆ.

ಜೇಷ್ಠತೆ ಆಧಾರದಲ್ಲಿ ಐಎಎಸ್ (ಕರ್ನಾಟಕ ಕೇಡರ್) ಶ್ರೇಣಿಗೆ ಪದೋನ್ನತಿ ನೀಡಲು ಯುಪಿಎಸ್‌ಸಿ (ಕೇಂದ್ರ ಲೋಕ ವ್ಯಕ್ತವಾಗಿದೆ. ಸೇವಾ ಆಯೋಗ) 2020 ರ ಡಿ. 29ರಂದು ಆಯ್ಕೆ ಸಮಿತಿ ಸಭೆ (ಎಸ್‌ಸಿಎಂ) ನಡೆಸಿತ್ತು.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಬಡ್ತಿ ಪಡೆದ ಅಧಿಕಾರಿಗಳ ಹೆಸರುಗಳನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕೃತವಾಗಿ ಕಳಿಸಿಕೊಟ್ಟಿತ್ತು.

ಹೀಗಾಗಿ ಒಟ್ಟು 26 ಜನ ಅಧಿಕಾರಿಗಳಿಗೆ ಪದೋನ್ನತಿ ಹೊಂದಲು ಅವಕಾಶವಿತ್ತು ಆದರೆ ಮೂವರ ಹೆಸರನ್ನು ಕೈಬಿಟ್ಟು ಅಂತಿಮವಾಗಿ 23 ಅಧಿಕಾರಿಗಳಿಗೆ ಬಡ್ತಿ ಭಾಗ್ಯ ನೀಡಲಾಗಿದೆ.