ನವದೆಹಲಿ –
ಸಂಸತ್ತಿನಲ್ಲಿ 27 ದಿನಗಳ ಅಧಿವೇಶನ ಬಹಳ ಯಶಸ್ವಿ ಯಾಗಿ ನಡೆದಿದ್ದು 13 ಮಸೂದೆಗಳು ಮಂಡನೆಯಾಗಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನವದೆಹಲಿ ಯಲ್ಲಿ ಮಾತನಾ ಡಿದ ಅವರು ಪ್ರತಿಪಕ್ಷಗಳ ಎಲ್ಲಾ ಬೇಡಿಕೆಯ ಮೇಲೂ ವಿಸ್ತ್ರತವಾಗಿ ಚರ್ಚೆ ಮಾಡಲಾಗಿದೆ.ಎರಡೂ ಸದನಗಳಲ್ಲಿ 11 ಮಸೂದೆಗಳು ಈವರೆಗೂ ಪಾಸ್ ಆಗಿದೆ.ಬೆಲೆ ಏರಿಕೆ ಬಗ್ಗೆಯೂ ಸರ್ಕಾರ ಉತ್ತರ ನೀಡಿದೆ. ಬಜೆಟ್ ಅಧಿವೇಶನ ಜನವರಿ 30 ರಂದು ಅಧಿವೇಶನ ಪ್ರಾರಂಭವಾಗಿತ್ತು. ಏಪ್ರಿಲ್ 7 ಕ್ಕೆ ಮುಕ್ತಾಯ ಕಂಡಿದೆ.ಒಟ್ಟು 27 ದಿನಗಳ ಕಾಲ ಕಾರ್ಯಕಲಾಪ ನಡೆದಿದೆ ಎಂದರು
ರಾಷ್ಟ್ರಪತಿಗಳು ಎರಡೂ ಸದನದ ಸದಸ್ಯರನ್ನು ಉದ್ದೇ ಶಿಸಿ ಮಾತನ್ನಾಡಿದ್ದಾರೆ.ಲೋಕಸಭೆಯಲ್ಲಿ ಇದೇ ಮೊದಲ ಬಾರಿಗೆ ರೈಲ್ವೇಸ್,ರಸ್ತೆ ಸಾರಿಗೆ,ವಿಮಾನ,ಪೋರ್ಟ್ ಮತ್ತು ಶಿಪ್ಪಿಂಗ್ ಈ ಎಲ್ಲಾ ಇಲಾಖೆಗಳ ಬಗ್ಗೆ ಏಕಕಾಲದಲ್ಲಿ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.