ಬೆಂಗಳೂರು –
“ರಾಸಲೀಲೆ ಸಿಡಿ ಸ್ಫೋಟ” ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿ ಈಗ ಇದು ಹಳೇಯ ವಿಚಾರವಾಗಿದೆ.ಇನ್ನೂ ಈ ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಿ ಎಂದು ರಾಜೀನಾಮೆ ಪತ್ರದಲ್ಲಿ ಸಚಿವರೇ ಉಲ್ಲೇಖಿಸಿದ್ದರು.ಇನ್ನೂ ಇವೆಲ್ಲದರ ನಡುವೆ ಇಲ್ಲಿಯವರೆಗೂ ನಿಗೂಢವಾಗಿದ್ದ ಸಿಡಿ ಯಲ್ಲಿನ ಯುವತಿಯ ಹೆಸರು ಕೊನೆಗೂ ಪತ್ತೆಯಾಗಿದೆ. ನಿಗೂಢವಾಗಿರುವ ಆರ್.ಟಿ.ನಗರದ ಪಿ.ಜಿ. ಸುಂದರಿ ಯಾರೂ ಎಂಬುದು ಹೊರಗೆ ಬಂದಿದೆ.

ಹೌದು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಆರ್.ಟಿ.ನಗರದ ಪಿಜಿಯಲ್ಲಿರುವುದಾಗಿ ಉಲ್ಲೇಖವಾಗಿತ್ತು ಆಕೆಯ ನಿಜವಾದ ಹೆಸರು ಸ್ವಾತಿ .ಈ ಸುಂದರಿ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾಳೆ.

ಇನ್ ಸ್ಟಾಗ್ರಾಮ್ ನಲ್ಲಿ ನೂರಾರು ಫೋಟೋ ಗಳನ್ನು ನೋಡಬಹುದು. ಆದ್ರೆ ಯಾವಾಗ ವಿಡಿಯೋ ಲೀಕ್ ಆಯ್ತೋ ಆಗ ತನ್ನ ಇನ್ ಸ್ಟಾಗ್ರಾಮ್ ಅಕೌಂಟ್ ಅನ್ನೆ ಡಿಲೀಟ್ ಮಾಡಿದ್ದಾಳೆ ಈ ಪಿಜಿ ಸುಂದರಿ.

ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಕುರಿತು ಹೊರ ಬಿದ್ದಿರುವ ವಿಡಿಯೋ ರೆಕಾರ್ಡಿಂಗ್ ಆಗಿರುವ ಸಮಯವಾಗಲೀ ವಿಡಿಯೋ ಅವಧಿ ಕೂಡ ಪೂರ್ಣ ಡಿಲೀಟ್ ಆಗಿದೆ. ಹೀಗಾಗಿ ಯಾವ ದಿನ ಇದು ನಡೆದಿದೆ ಎಂಬ ವಿವರಗಳಿಲ್ಲ. ಎಲ್ಲಿ ನಡೆದಿದೆ ಎಂಬ ವಿವರಗಳು ಇಲ್ಲ. ಹೀಗಾಗಿ ಪೊಲೀಸರು ವಿಡಿಯೋ ಆಧರಿಸಿ ಕೂಡ ತನಿಖೆ ಆರಂಭಿಸಲು ಸದ್ಯದ ಮಟ್ಟಿಗೆ ಸಾಧ್ಯವಾಗುತ್ತಿಲ್ಲ

ಇನ್ನು ಜಾರಕಿಹೊಳಿ ಜತೆ ಸಂಭಾಷಣೆ ಮಾಡಿರುವ ಹುಡುಗಿಗೂ, ರಾಸಲೀಲೆಯಲ್ಲಿ ತೊಡಗಿರುವ ಹುಡುಗಿ ಬೇರೆಯಾಗಿರಬಹುದಾ ಎಂಬ ಅನುಮಾನ ಕೂಡ ಎದ್ದಿದೆ. ವಿಡಿಯೋ ಕರೆಯಲ್ಲಿ ಕಾಣಿಸಿರುವ ಯುವತಿಯ ಚಿತ್ರಕ್ಕೂ, ರಾಸಲೀಲೆಯಲ್ಲಿ ತೊಡಗಿರುವ ಯುವತಿ ಚಿತ್ರಕ್ಕೂ ವ್ಯತ್ಯಾಸ ವಿರುವುದು ಗೋಚರಿಸುತ್ತಿದ್ದು, ಅಂತೂ ತನಿಖೆಯೊಂದಿಗೆ ಎಲ್ಲವೂ ಬಯಲಾಗಲಿದೆ.