ಬೆಂಗಳೂರು –
ರಮೇಶ್ ಜಾರಕಿಹೊಳಿ ಕಾಮ ಪುರಾಣ ಬಹಿರಂಗ ವಾದ ಬೆನ್ನಲ್ಲೇ ಇನ್ನೂ ಕೆಲ ರಾಜಕಾರಣಿ ಗಳ CD ಗಳು ಹೊರಬರಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ‘ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ₹5 ಕೋಟಿ ಡೀಲ್ ಆಗಿದೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಕಳೆದ 3 ತಿಂಗಳಿಂದ ಈ ಡೀಲ್ ನಡೆದಿದೆ. ದೊಡ್ಡ ದೊಡ್ಡವರೇ ಈ ಪ್ರಕರಣ ದಲ್ಲಿ ಇದ್ದಾರೆ. ಇದನ್ನು ತನಿಖೆ ಮಾಡಿಸುವ ಜವಬ್ದಾರಿ ಸರ್ಕಾರದ್ದು. ಇನ್ನು ರಾಜಕಾರಣಿಗಳ ಸಿಡಿ ಇದೆ ಅಂತ ಬ್ಲಾಕ್ ಮೇಲ್ ಮಾಡೋರನ್ನ ಅರೆಸ್ಟ್ ಮಾಡಿ, ಏರೋಪ್ಲೇನ್ ಹತ್ತಿಸಬೇಕು. ಅದ್ಯಾರೋ ಒಬ್ಬ ಮಾಜಿ ಸಿಎಂ ಅದೆಲ್ಲಿಗೋ ಹೋಗಿ ಬರ್ತಾರೆ ಅಂತ ಹೇಳಿದ್ದಾನೆ. ರಾಜ್ಯದಲ್ಲಿ ದೇವೇಗೌಡ, ಎಸ್.ಎಂ. ಕೃಷ್ಣ ಸೇರಿ ತುಂಬಾ ಜನ ಮಾಜಿ ಸಿಎಂಗಳಿದ್ದಾರೆ ಎಂದರು.
ಯಾರು ಆ ಮಾಜಿ ಸಿಎಂ ಅಂತ ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ. ಇನ್ನೂ 3-4 ಕ್ಯಾಸೆಟ್ ಇದೆ ಅಂತಿದ್ದಾನೆ. ಇದನ್ನೆಲ್ಲಾ ಅವನೇ ಮಾಡಿಸುತ್ತಿದ್ದಾ ನೆಯೇ ಅಥವಾ ಅವನ ಮೂಲಕ ಇನ್ಯಾರೋ ಮಾಡ್ತಿದ್ದಾರೋ ಅನ್ನೋದು ಗೊತ್ತಾಗಬೇಕು. ತನಿಖೆ ನಡೆಸಿ ಅದನ್ನು ರಾಜ್ಯದ ಜನರ ಮುಂದಿಡಬೇಕು. ರಮೇಶ್ ಜಾರಕಿಹೊಳಿಯಿಂದ ರಾಜೀನಾಮೆ ತೆಗೆದುಕೊಳ್ಳಬೇಕು ಅಂತಿತ್ತು. ಹೀಗಾಗಿ ಈ ನಾಟಕ ಮಾಡಿದ್ದಾರೆ’ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಇನ್ನು ರಮೇಶ್ ಜಾರಕಿಹೊಳಿ ಅವರ ಆಪ್ತ ಮಹೇಶ್ ಕುಮಟಳ್ಳಿ ಮಾತನಾಡಿ, ‘ನಾನು ಕೂಡ ವಾಟ್ಸಾಪ್ನಲ್ಲಿ ವಿಡಿಯೋ ನೋಡಿದ್ದೀನಿ. ಅಸಲಿಗೆ ರಮೇಶ್ ಜಾರಕಿಹೊಳಿ ಮುಖದಲ್ಲಿ ಒಂದು ಮಚ್ಚೆ ಇದೆ. ಆದ್ರೆ ವಿಡಿಯೋದಲ್ಲಿ ಆ ಮಚ್ಚೆ ಕಾಣ್ತಿಲ್ಲ. ಹೀಗಾಗಿ ಇದು ಎಡಿಟ್ ಮಾಡಿದಂತೆ ಕಾಣ್ತಿದೆ ಎಂದರು